34ಆದರೆ ಅಬ್ಷಾಲೋಮನು ಓಡಿ ಹೋದನು; ಆಗ ಕಾವಲುಗಾರನು ತನ್ನ ಕಣ್ಣುಗಳ ನ್ನೆತ್ತಿ ನೋಡುವಾಗ ಇಗೋ, ಅವನ ಹಿಂಭಾಗದಲ್ಲಿ ಬೆಟ್ಟದ ಪಾರ್ಶ್ವದ ಮಾರ್ಗವಾಗಿ ಅನೇಕ ಜನರು ಬರುತ್ತಿದ್ದರು.
35ಆಗ ಯೋನಾದಾಬನು ಅರಸನಿಗೆಇಗೋ, ಅರಸನ ಮಕ್ಕಳು ಬರುತ್ತಿದ್ದಾರೆ; ನಿನ್ನ ಸೇವ ಕನು ಹೇಳಿದ ಹಾಗೆಯೇ ಆಯಿತು ಅಂದನು.
36ಅವನು ಮಾತನಾಡಿ ತೀರಿಸಿದಾಗ ಇಗೋ, ಅರಸನ ಮಕ್ಕಳು ಬಂದು ಗಟ್ಟಿಯಾಗಿ ಅತ್ತರು. ಅರಸನೂ ಅವನ ಎಲ್ಲಾ ಸೇವಕರೂ ಬಹಳವಾಗಿ ಅತ್ತರು.
37ಆದರೆ ಅಬ್ಷಾ ಲೋಮನು ಓಡಿಹೋಗಿ ಗೆಷೂರಿನ ಅರಸನಾಗಿರುವ ಅವ್ಮೆಾಹೂದನ ಮಗನಾದ ತಲ್ಮೈಯನ ಬಳಿಗೆ ಹೋದನು. ದಾವೀದನು ದಿನಂಪ್ರತಿ ತನ್ನ ಮಗನಿಗಾಗಿ ದುಃಖಪಡುತ್ತಿದ್ದನು.
38ಹೀಗೆಯೇ ಅಬ್ಷಾಲೋಮನು ಗೆಷೂರಿಗೆ ಓಡಿ ಹೋಗಿ ಅಲ್ಲಿ ಮೂರು ವರುಷ ಇದ್ದನು.