1ಅರಸನ ಹೃದಯವು ಅಬ್ಷಾಲೋಮನ ಕಡೆಗೆ ಇರುವದನ್ನು ಚೆರೂಯಳ ಮಗನಾದ ಯೋವಾಬನು ತಿಳಿದು.
2ತೆಕೋವದಿಂದ ಜ್ಞಾನವುಳ್ಳ ಒಬ್ಬ ಸ್ತ್ರೀಯನ್ನು ಕರೇ ಕಳುಹಿಸಿ ಅವಳಿಗೆ ನಿನ್ನನ್ನು ಬೇಡಿಕೊಳ್ಳುವದೇನಂದರೆ--ನೀನು ಗೋಳಾ ಡುವವಳ ಹಾಗೆ ನಟನೆ ಮಾಡಿ ಶೋಕವಸ್ತ್ರಗಳನ್ನು ಧರಿಸಿಕೊಂಡು
3ತಲೆಗೆ ಎಣ್ಣೆಹಚ್ಚಿಕೊಳ್ಳದೆ ಸತ್ತವರಿ ಗೋಸ್ಕರ ಅನೇಕ ದಿವಸಗಳಿಂದ ದುಃಖಿಸುವವಳ ಹಾಗಿದ್ದು ಅರಸನ ಬಳಿಗೆ ಹೋಗಿ ಅವನ ಸಂಗಡ ಈ ಪ್ರಕಾರ ಮಾತನಾಡು ಎಂದು ಹೇಳಿ ಯೋವಾ ಬನು ಅವಳಿಗೆ ಕಲಿಸಿಕೊಟ್ಟನು.
4ಹಾಗೆಯೇ ತೆಕೋವಿನವಳಾದ ಆ ಸ್ತ್ರೀಯು ಅರಸನ ಸಂಗಡ ಮಾತನಾಡಿ ನೆಲಕ್ಕೆ ಬಿದ್ದು ಭಕ್ತಿ ಗೌರವದಿಂದ ವಂದಿಸಿ--ಅರಸೇ, ಸಹಾಯಮಾಡು ಎಂದು ಕೇಳಿ ಕೊಂಡಳು.
5ಅರಸನು ಅವಳಿಗೆ ನಿನಗೆ ಏನಾಯಿತು ಅಂದನು. ಅದಕ್ಕವಳು--ನಾನು ನಿಶ್ಚಯವಾಗಿ ವಿಧವೆ ಯಾದ ಸ್ತ್ರೀಯು; ನನ್ನ ಗಂಡನು ಸತ್ತುಹೋಗಿದ್ದಾನೆ.