18ಚೆರೂಯಳ ಮೂವರು ಮಕ್ಕಳಾದ ಯೋವಾ ಬನೂ ಅಬಿಷೈಯೂ ಅಸಾಹೇಲನೂ ಅಲ್ಲಿ ಇದ್ದರು. ಅಸಾಹೇಲನು ಅಡವಿಯ ಜಿಂಕೆಯ ಹಾಗೆ ಪಾದ ತ್ವರಿತನಾಗಿದ್ದನು.
19ಅಸಾಹೇಲನು ಅಬ್ನೇರನನ್ನು ಹಿಂದಟ್ಟಿ ಅಬ್ನೇರನನ್ನು ಹಿಂದಟ್ಟುವದರಲ್ಲಿ ಬಲಗಡೆ ಗಾದರೂ ಎಡಗಡೆಗಾದರೂ ತಿರುಗದೆ ಇದ್ದನು.
20ಆದದರಿಂದ ಅಬ್ನೇರನು ಹಿಂದಕ್ಕೆ ತಿರುಗಿ ನೋಡಿನೀನು ಅಸಾಹೇಲನಲ್ಲವೇ ಅಂದನು.
21ಅದಕ್ಕವನುನಾನೇ ಅಂದನು. ಆಗ ಅಬ್ನೇರನು ಅವನಿಗೆ--ನೀನು ಬಲಗಡೆಗಾದರೂ ಎಡಗಡೆಗಾದರೂ ತಿರುಗಿ ಯೌವ ನಸ್ಥರಲ್ಲಿ ಒಬ್ಬನನ್ನು ಹಿಡಿದು ಅವನ ಆಯುಧಗಳನ್ನು ತಕ್ಕೋ ಅಂದನು. ಆದರೆ ಅಸಾಹೇಲನು ಅವನ ಹಿಂದಿನಿಂದ ತಿರುಗಲೊಲ್ಲದೆ ಇದ್ದನು.
22ಅಬ್ನೇರನು ಅಸಾಹೇಲನಿಗೆ--ನೀನು ನನ್ನನ್ನು ಹಿಂಬಾಲಿಸುವದನ್ನು ಬಿಟ್ಟು ತಿರುಗಿ ಹೋಗು; ನಾನು ನಿನ್ನನ್ನು ನೆಲಕ್ಕೆ ಹೊಡೆದು ಬಿಡುವದು ಯಾಕೆ? ನಾನು ನಿನ್ನ ಸಹೋ ದರನಾದ ಯೋವಾಬನಿಗೆ ಮುಖತೋರಿಸುವದು ಹೇಗೆ ಅಂದನು.