1ಸೌಲನ ಮನೆಗೂ ದಾವೀದನ ಮನೆಗೂ ಬಹು ದಿವಸಗಳು ಯುದ್ಧವುನಡೆಯಿತು. ದಾವೀದನು ಬಲವಾಗುತ್ತಾ ಬಂದನು. ಸೌಲನ ಮನೆ ಯವರು ಬಲಹೀನರಾಗುತ್ತಾ ಹೋದರು.
2ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದ ಮಕ್ಕಳು ಯಾರಂದರೆ, ಇಜ್ರೇಲಿನವಳಾದ ಅಹೀನೋವಮ ಳಿಂದ ಹುಟ್ಟಿದ ತನ್ನ ಚೊಚ್ಚಲ ಮಗನಾದ ಅಮ್ನೋ ನನೂ
3ಕರ್ಮೆಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳಿಂದ ಹುಟ್ಟಿದ ಅವನ ಎರಡನೇ ಮಗನಾದ ಕಿಲಾಬನೂ ಗೆಷೂರಿನ ಅರಸನಾಗಿರುವ ತಲ್ಮೈಯನ ಮಗಳಾದ ಮಾಕಳಿಂದ ಹುಟ್ಟಿದ ಅವನ ಮೂರನೇ ಮಗನಾದ ಅಬ್ಷಾಲೋಮನೂ