15ದೇವರು ಶುದ್ಧಮಾಡಿದ್ದನ್ನು ನೀನು ಹೊಲೆಯೆನ್ನಬೇಡ ಎಂದು ತಿರಿಗಿ ಎರಡನೆಯ ಸಾರಿ ಅವನಿಗೆ ಹೇಳುವ ಧ್ವನಿಯು ಕೇಳಿಸಿತು.
16ಹೀಗೆ ಮೂರು ಸಾರಿ ಆಯಿತು. ತರು ವಾಯ ಆ ಪಾತ್ರೆಯು ಪುನಃ ಆಕಾಶದೊಳಗೆ ಸೇರಿ ಕೊಂಡಿತು.
17ಪೇತ್ರನು ತನಗಾದ ಈ ದರ್ಶನವು ಏನಾಗಿರ ಬಹುದೆಂದು ತನ್ನಲ್ಲಿ ಸಂದೇಹಪಡುತ್ತಿರುವಾಗ ಇಗೋ, ಕೊರ್ನೇಲ್ಯನು ಕಳುಹಿಸಿದ್ದ ಆ ಮನುಷ್ಯರು ಸೀಮೋ ನನ ಮನೆ ಯಾವದು ಎಂದು ಕೇಳಿಕೊಂಡು ಬಂದು ಬಾಗಿಲ ಬಳಿಯಲ್ಲಿ ನಿಂತು
18ಪೇತ್ರನೆನಿಸಿಕೊಳ್ಳುವ ಸೀಮೋನನು ಇಲ್ಲಿ ಇಳುಕೊಂಡಿದ್ದಾನೋ ಎಂದು ಕೂಗಿ ಕೇಳಿದರು.
19ಪೇತ್ರನು ಆ ದರ್ಶನದ ವಿಷಯ ದಲ್ಲಿ ಆಲೋಚನೆ ಮಾಡುತ್ತಿರಲು ಆತ್ಮನು ಅವ ನಿಗೆ--ಅಗೋ, ಮೂವರು ಮನುಷ್ಯರು ನಿನ್ನನ್ನು ವಿಚಾರಿಸುತ್ತಾರೆ;