44ಪೇತ್ರನು ಈ ಮಾತುಗಳನ್ನು ಇನ್ನೂ ಹೇಳು ತ್ತಿರುವಾಗ ವಾಕ್ಯವನ್ನು ಕೇಳಿದವರೆಲ್ಲರ ಮೇಲೆ ಪವಿ ತ್ರಾತ್ಮನು ಇಳಿದನು.
45ಪೇತ್ರನ ಸಂಗಡ ಬಂದಿದ್ದ ಸುನ್ನತಿಯಾದವರಲ್ಲಿ ನಂಬಿದವರೆಲ್ಲಾ ಅನ್ಯಜನಗಳ ಮೇಲೆಯೂ ಪವಿತ್ರಾತ್ಮನು ಸುರಿಸಲ್ಪಟ್ಟದ್ದರಿಂದ ಅತ್ಯಾ ಶ್ಚರ್ಯಪಟ್ಟರು.
46ಯಾಕಂದರೆ ಅವರು ಭಾಷೆಗಳನ್ನು ಮಾತನಾಡುತ್ತಾ ದೇವರನ್ನು ಕೊಂಡಾಡುತ್ತಾ ಇದ್ದದ್ದನ್ನು ಅವರು ಕೇಳಿದರು. ಆಗ ಪೇತ್ರನು--
47ನಮ್ಮ ಹಾಗೆಯೇ ಪವಿತ್ರಾತ್ಮನನ್ನು ಹೊಂದಿದ ಇವರಿಗೆ ನೀರಿನ ಬಾಪ್ತಿಸ್ಮವಾಗದಂತೆ ಯಾರಾದರೂ ಅಭ್ಯಂತರ ಮಾಡಾರೇ ಎಂದು ಹೇಳಿ--
48ಅವರು ಕರ್ತನ ಹೆಸರಿನಲ್ಲಿ ಬಾಪ್ತಿಸ್ಮ ಹೊಂದುವಂತೆ ಅಪ್ಪಣೆಕೊಟ್ಟನು. ಅಮೇಲೆ ಅವನು ಇನ್ನೂ ಕೆಲವು ದಿವಸ ಇರಬೇಕೆಂದು ಅವರು ಬೇಡಿಕೊಂಡರು.