10ಆದರೆ ಪೌಲನು ಇಳಿದು ಹೋಗಿ ಅವನಮೇಲೆ ಬಿದ್ದು ತಬ್ಬಿಕೊಂಡು--ನೀವು ಕಳವಳಪಡಬೇಡಿರಿ, ಅವನ ಪ್ರಾಣ ಅವನಲ್ಲಿ ಅದೆ ಎಂದು ಹೇಳಿದನು.
11ಆಗ ಅವನು ಮತ್ತೆ ಮೇಲಕ್ಕೆ ಹೋಗಿ ರೊಟ್ಟಿ ಮುರಿದು ಊಟಮಾಡಿ ಬಹಳ ಹೊತ್ತು ಬೆಳಗಾಗುವ ತನಕ ಮಾತನಾಡಿ ಹಾಗೆ ಹೊರಟು ಹೋದನು.
12ಅವರು ಜೀವಿತನಾದ ಆ ಯೌವನಸ್ಥನನ್ನು ಕರೆದು ಕೊಂಡು ಬರಲು ಅವರಿಗೆ ಬಹಳ ಆದರಣೆ ಉಂಟಾಯಿತು.
13ನಾವು ಮೊದಲು ಹೋಗಿ ಅಸ್ಸೊಸಿನಲ್ಲಿ ಪೌಲ ನನ್ನು ಹತ್ತಿಸಿಕೊಳ್ಳಬೇಕೆಂದು ಅಲ್ಲಿಗೆ ಸಮುದ್ರ ಪ್ರಯಾಣ ಮಾಡಿದೆವು. ಪೌಲನು ಹಾಗೆಯೇ ನಮಗೆ ಅಪ್ಪಣೆಮಾಡಿ ತಾನು ಕಾಲು ನಡೆಯಾಗಿ ಹೋಗಬೇಕೆಂದು ಮನಸ್ಸು ಮಾಡಿದನು.
14ಅಸ್ಸೊಸಿ ನಲ್ಲಿ ಅವನು ನಮ್ಮನ್ನು ಕೂಡಿಕೊಂಡಾಗ ನಾವು ಅವನನ್ನು ಹತ್ತಿಸಿಕೊಂಡು ಮಿತಿಲೇನೆಗೆ ಬಂದೆವು.