ಅಪೋಸ್ತಲರು 20

ಯಾಕಂದರೆ ಪೌಲನು ತನಗೆ ಸಾಧ್ಯವಾದರೆ ಪಂಚಾಶತ್ತಮದ ದಿವಸ ಯೆರೂಸಲೇಮಿನಲ್ಲಿರಬೇಕೆಂದು ಅವಸರ ಪಡುತ್ತಾ ಇದ್ದದರಿಂದ ಆಸ್ಯದಲ್ಲಿ ಕಾಲವನ್ನು ಕಳೆಯು ವದಕ್ಕೆ ಮನಸ್ಸಿಲ್ಲದೆ ಸಮುದ್ರ ಪ್ರಯಾಣವಾಗಿ ಎಫೆಸವನ್ನು ದಾಟಿಹೋಗಬೇಕೆಂದು ತೀರ್ಮಾನಿಸಿ ಕೊಂಡಿದ್ದನು.

Acts 20:16 (UKJV) For Paul had determined to sail by Ephesus, because he would not spend the time in Asia: for he hasted, if it were possible for him, to be at Jerusalem the day of Pentecost.

14ಅಸ್ಸೊಸಿ ನಲ್ಲಿ ಅವನು ನಮ್ಮನ್ನು ಕೂಡಿಕೊಂಡಾಗ ನಾವು ಅವನನ್ನು ಹತ್ತಿಸಿಕೊಂಡು ಮಿತಿಲೇನೆಗೆ ಬಂದೆವು.

15ಅಲ್ಲಿಂದ ಹೊರಟು ಮರುದಿನ ಖೀಯೊಸ್‌ ದ್ವೀಪಕ್ಕೆದುರಾಗಿ ಬಂದು ಅದರ ಮರುದಿನ ಸಾಮೊಸಿಗೆ ಬಂದು ತ್ರೋಗುಲ್ಯದಲ್ಲಿ ಇದ್ದು ಅದರ ಮರುದಿನ ನಾವು ಮಿಲೇತಕ್ಕೆ ಸೇರಿದೆವು.

16ಯಾಕಂದರೆ ಪೌಲನು ತನಗೆ ಸಾಧ್ಯವಾದರೆ ಪಂಚಾಶತ್ತಮದ ದಿವಸ ಯೆರೂಸಲೇಮಿನಲ್ಲಿರಬೇಕೆಂದು ಅವಸರ ಪಡುತ್ತಾ ಇದ್ದದರಿಂದ ಆಸ್ಯದಲ್ಲಿ ಕಾಲವನ್ನು ಕಳೆಯು ವದಕ್ಕೆ ಮನಸ್ಸಿಲ್ಲದೆ ಸಮುದ್ರ ಪ್ರಯಾಣವಾಗಿ ಎಫೆಸವನ್ನು ದಾಟಿಹೋಗಬೇಕೆಂದು ತೀರ್ಮಾನಿಸಿ ಕೊಂಡಿದ್ದನು.

17ಅವನು ಮಿಲೇತದಿಂದ ಎಫೆಸಕ್ಕೆ ಹೇಳಿಕಳುಹಿಸಿ ಅಲ್ಲಿಯ ಸಭೆಯ ಹಿರಿಯರನ್ನು ಕರೆಸಿದನು. ಅವರು ಅವನ ಬಳಿಗೆ ಬಂದಾಗ ಅವರಿಗೆ ಅವನು ಹೇಳಿದ್ದೇ ನಂದರೆ--

18ನಾನು ಆಸ್ಯಕ್ಕೆ ಬಂದ ಮೊದಲನೆಯ ದಿವಸದಿಂದ ನಿಮ್ಮ ಮಧ್ಯೆ ಎಲ್ಲಾ ಕಾಲಗಳಲ್ಲಿ ಹೇಗೆ ನಡೆದುಕೊಂಡೆನೆಂಬದನ್ನು ನೀವೇ ಬಲ್ಲಿರಿ.

Kannada Bible (Old Version), Bible Society of India.