ಅಪೋಸ್ತಲರು 25

ಕೆಲವು ದಿವಸಗಳಾದ ಮೇಲೆ ಅರಸನಾದ ಅಗ್ರಿಪ್ಪನೂ ಬೆರ್ನಿಕೆಯೂ ಫೆಸ್ತನನ್ನು ವಂದಿಸುವದಕ್ಕಾಗಿ ಕೈಸರೈಯಕ್ಕೆ ಬಂದರು.

Acts 25:13 (UKJV) And after certain days king Agrippa and Bernice came unto Caesarea to salute Festus.

11ನಾನು ಅನ್ಯಾಯಮಾಡಿದವ ನಾಗಿದ್ದರೆ ಇಲ್ಲವೆ ಮರಣದಂಡನೆಗೆ ಕಾರಣವಾದ ಯಾವದನ್ನಾದರೂ ನಡಿಸಿದ್ದರೆ ಸಾಯುವದಕ್ಕೆ ನಾನು ಬೇಡವೆನ್ನುವದಿಲ್ಲ; ನನ್ನ ಮೇಲೆ ಅವರು ತಪ್ಪು ಹೊರಿಸುವವುಗಳಲ್ಲಿ ಯಾವದೂ ಇಲ್ಲದೆ ಹೋದರೆ ನನ್ನನ್ನು ಅವರಿಗೆ ಯಾವ ಮನುಷ್ಯನೂ ಒಪ್ಪಿಸಲಾರನು; ನಾನು ಕೈಸರ

12ಆಗ ಫೆಸ್ತನು ಆಲೋಚನಾ ಸಭೆಯವ ರೊಂದಿಗೆ ಮಾತನಾಡಿ--ಕೈಸರನ ಮುಂದೆ ಹೇಳಿ ಕೊಳ್ಳುತ್ತೇನೆ ಎಂದು ನೀನು ಹೇಳಿದಿಯಲ್ಲಾ, ನೀನು ಕೈಸರನ ಬಳಿಗೇ ಹೋಗಬೇಕು ಎಂದು ಉತ್ತರ ಕೊಟ್ಟನು.

13ಕೆಲವು ದಿವಸಗಳಾದ ಮೇಲೆ ಅರಸನಾದ ಅಗ್ರಿಪ್ಪನೂ ಬೆರ್ನಿಕೆಯೂ ಫೆಸ್ತನನ್ನು ವಂದಿಸುವದಕ್ಕಾಗಿ ಕೈಸರೈಯಕ್ಕೆ ಬಂದರು.

14ಅಲ್ಲಿ ಅವರು ಅನೇಕ ದಿವಸಗಳು ಇದ್ದ ತರುವಾಯ ಪೌಲನ ವಿಷಯವಾಗಿ ಫೆಸ್ತನು ಅರಸನಿಗೆ--ಫೇಲಿಕ್ಸನು ಬಂಧನಗಳಲ್ಲಿ ಬಿಟ್ಟು ಹೋದ ಒಬ್ಬ ಮನುಷ್ಯನು ಇದ್ದಾನೆ.

15ನಾನು ಯೆರೂಸಲೇಮಿನಲ್ಲಿದ್ದಾಗ ಪ್ರಧಾನಯಾಜಕರೂ ಯೆಹೂದ್ಯರ ಹಿರಿಯರೂ ಅವನ ವಿಷಯವಾಗಿ ನನಗೆ ತಿಳಿಸಿ ಅವನಿಗೆ ವಿರೋಧವಾಗಿ ತೀರ್ಪುಮಾಡ ಬೇಕೆಂದು ನನ್ನನ್ನು ಬೇಡಿಕೊಂಡರು.

Kannada Bible (Old Version), Bible Society of India.