16ಜನರೊಳಗಿಂದ ಸೈನಿಕರೆಲ್ಲರೂ ಸತ್ತುಹೋದ ನಂತರ
17ಕರ್ತನು ನನಗೆ--ಇಂದು ನೀನು ಮೋವಾಬಿನ ಮೇರೆಯಾದ ಆರ್ ಅನ್ನು ದಾಟಬೇಕು;
18ಅಮ್ಮೋನನ ಮಕ್ಕಳೆದುರಿಗೆ ನೀನು ಬಂದರೆ ಅವರಿಗೆ ಉಪದ್ರ ಕೊಡಬೇಡ; ಅವರ ಸಂಗಡ ಜಗಳವಾಡ ಬೇಡ;
19ನಾನು ಅಮ್ಮೋನನ ಮಕ್ಕಳ ದೇಶದಲ್ಲಿ ನಿನಗೆ ಸ್ವಾಸ್ತ್ಯವನ್ನು ಕೊಡುವದಿಲ್ಲ. ನಾನು ಅದನ್ನು ಲೋಟನ ಮಕ್ಕಳಿಗೆ ಸ್ವಾಸ್ತ್ಯವಾಗಿ ಕೊಟ್ಟೆನಲ್ಲಾ ಅಂದನು.
20(ಇದು ಸಹ ರಾಕ್ಷಸರ ದೇಶವೆನಿಸಿಕೊಂಡಿತು; ಪೂರ್ವದಲ್ಲಿ ರಾಕ್ಷಸರು ಅದರಲ್ಲಿ ವಾಸಮಾಡಿದರು; ಅಮ್ಮೋನಿಯರು ಅವರಿಗೆ ಜಂಜುಮ್ಯರೆಂದು ಕರೆದರು.