ಎಸ್ತೇರ್ 2

ಆ ದಿವಸಗಳಲ್ಲಿ ಮೊರ್ದೆಕೈಯು ಅರಮನೆಯ ಬಾಗಲಲ್ಲಿ ಕುಳಿತಿರು ವಾಗ ದ್ವಾರಪಾಲಕರಾದಂಥ ಅರಸನ ಮನೆವಾರ್ತೆ ಯವರಾದ ಬಿಗೆತಾನನೂ ತೆರೆಷನೂ ರೌದ್ರವುಳ್ಳ ವರಾಗಿ ಅರಸನಾದ ಅಹಷ್ವೇರೋಷನ ಮೇಲೆ ಕೈ ಹಾಕಲು ಹುಡುಕಿದರು.

Esther 2:21 (UKJV) In those days, while Mordecai sat in the king's gate, two of the king's chamberlains, Bigthan and Teresh, of those which kept the door, were angry, and sought to lay hands on the king Ahasuerus.

19ಆದರೆ ಕನ್ಯಾಸ್ತ್ರೀಯರು ಎರಡನೇ ಸಾರಿ ಕೂಡಿಸ ಲ್ಪಡುವಾಗ ಮೊರ್ದೆಕೈಯು ಅರಮನೆಯ ಬಾಗಲಲ್ಲಿ ಕುಳಿತಿದ್ದನು.

20ಎಸ್ತೇರಳು ಮೊರ್ದೆಕೈ ತನಗೆ ಆಜ್ಞಾ ಪಿಸಿದ ಹಾಗೆ ತನ್ನ ಬಂಧುಗಳಿಗೂ ತನ್ನ ಜನರಿಗೂ ತಿಳಿಸದೆ ಇದ್ದಳು. ಎಸ್ತೇರಳು ಮೊರ್ದೆಕೈಯ ಆರೈಕೆಯಲ್ಲಿ ಇದ್ದಾಗ ಅವನ ಆಜ್ಞೆಯನ್ನು ಕೈಕೊಂಡಿದ್ದಂತೆಯೇ ಅವಳು ಮಾಡಿದಳು.

21ಆ ದಿವಸಗಳಲ್ಲಿ ಮೊರ್ದೆಕೈಯು ಅರಮನೆಯ ಬಾಗಲಲ್ಲಿ ಕುಳಿತಿರು ವಾಗ ದ್ವಾರಪಾಲಕರಾದಂಥ ಅರಸನ ಮನೆವಾರ್ತೆ ಯವರಾದ ಬಿಗೆತಾನನೂ ತೆರೆಷನೂ ರೌದ್ರವುಳ್ಳ ವರಾಗಿ ಅರಸನಾದ ಅಹಷ್ವೇರೋಷನ ಮೇಲೆ ಕೈ ಹಾಕಲು ಹುಡುಕಿದರು.

22ಈ ಕಾರ್ಯವು ಮೊರ್ದೆ ಕೈಯಿಗೆ ತಿಳಿದದ್ದರಿಂದ ಅವನು ಅದನ್ನು ರಾಣಿಯಾದ ಎಸ್ತೇರಳಿಗೆ ತಿಳಿಸಿದನು; ಎಸ್ತೇರಳು ಮೊರ್ದೆ ಕೈಯಿಯ ಹೆಸರಿನಲ್ಲಿ ಅದನ್ನು ಅರಸನಿಗೆ ತಿಳಿಸಿದಳು.

23ಈ ವಿಷಯವನ್ನು ವಿಚಾರಿಸಿದಾಗ ನಿಜವಾಯಿತು; ಆಗ ಅವರಿಬ್ಬರೂ ಮರದಲ್ಲಿ ತೂಗುಹಾಕಲ್ಪಟ್ಟರು. ಇದು ಅರಸನ ಮುಂದೆ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿತು.

Kannada Bible (Old Version), Bible Society of India.