ಯೆಹೆಜೆಕೇಲ್ 36

ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಯಾಕಂದರೆ ನಿನ್ನ ಶತ್ರುವು ನಿನಗೆ ವಿರೋಧವಾಗಿ ಆಹಾ, ಪೂರ್ವದ ಉತ್ತಮ ಸ್ಥಳಗಳು ನಮಗೆ ಸ್ವಾಸ್ತ್ಯವಾದವು ಎಂದು ಹೇಳುವರು;

Ezekiel 36:2 (UKJV) Thus says the Lord GOD; Because the enemy has said against you, Aha, even the ancient high places are ours in possession:

1ಅಲ್ಲದೆ ಮನುಷ್ಯಪುತ್ರನೇ, ಇಸ್ರಾಯೇಲ್‌ ಪರ್ವತಗಳ ಕಡೆಗೆ ಪ್ರವಾದಿಸು ಮತ್ತು ಹೇಳು--ಇಸ್ರಾಯೇಲ್‌ ಪರ್ವತಗಳೇ, ನೀವು ಕರ್ತನ ವಾಕ್ಯವನ್ನು ಕೇಳಿರಿ;

2ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಯಾಕಂದರೆ ನಿನ್ನ ಶತ್ರುವು ನಿನಗೆ ವಿರೋಧವಾಗಿ ಆಹಾ, ಪೂರ್ವದ ಉತ್ತಮ ಸ್ಥಳಗಳು ನಮಗೆ ಸ್ವಾಸ್ತ್ಯವಾದವು ಎಂದು ಹೇಳುವರು;

3ಆದದ ರಿಂದ ಪ್ರವಾದಿಸು ಮತ್ತು ಹೇಳು, ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಅವರು ನಿನ್ನನ್ನು ಹಾಳುಮಾಡಿ; ಎಲ್ಲಾ ಕಡೆಗಳಿಂದಲೂ ನುಂಗಿಬಿಟ್ಟರು. ಅದು ನೀವು ಅನ್ಯಜನಾಂಗಗಳ ಉಳಿಯುವಿಕೆಗೆ ಸ್ವಾಸ್ತ್ಯವಾಗ ಬೇಕೆಂದು ನೀವು ಮಾತನಾಡುವವರ ತುಟಿಗಳಲ್ಲಿಯೂ ಜನರ ನಿಂದೆಯಲ್ಲಿಯೂ ಮೇಲೆತ್ತಲ್ಪಟ್ಟಿದ್ದೀರಿ;

4ಆದ ದರಿಂದ ಇಸ್ರಾಯೇಲ್‌ ಪರ್ವತಗಳೇ, ನೀವು ದೇವ ರಾದ ಕರ್ತನ ವಾಕ್ಯವನ್ನು ಕೇಳಿರಿ--ಹೀಗೆ ಪರ್ವತ ಗಳಿಗೂ ಬೆಟ್ಟಗಳಿಗೂ ನದಿಗಳಿಗೂ ಕಣಿವೆಗಳಿಗೂ ಹಾಳಾದ ಒಣಭೂಮಿಗೂ ಸುತ್ತಣ ಅನ್ಯಜನಾಂಗ ಗಳಲ್ಲಿ ಉಳಿದವರು ಕೊಳ್ಳೆಹೊಡೆದು ತೊರೆದು ಬಿಡುವ ಹಾಳು ಪಟ್ಟಣಗಳಿಗೂ ದೇವರಾದ ಕರ್ತನು ಹೇಳು ತ್ತಾನೆ.

Kannada Bible (Old Version), Bible Society of India.