1ಅಲ್ಲದೆ ಮನುಷ್ಯಪುತ್ರನೇ, ಇಸ್ರಾಯೇಲ್ ಪರ್ವತಗಳ ಕಡೆಗೆ ಪ್ರವಾದಿಸು ಮತ್ತು ಹೇಳು--ಇಸ್ರಾಯೇಲ್ ಪರ್ವತಗಳೇ, ನೀವು ಕರ್ತನ ವಾಕ್ಯವನ್ನು ಕೇಳಿರಿ;
2ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಯಾಕಂದರೆ ನಿನ್ನ ಶತ್ರುವು ನಿನಗೆ ವಿರೋಧವಾಗಿ ಆಹಾ, ಪೂರ್ವದ ಉತ್ತಮ ಸ್ಥಳಗಳು ನಮಗೆ ಸ್ವಾಸ್ತ್ಯವಾದವು ಎಂದು ಹೇಳುವರು;
3ಆದದ ರಿಂದ ಪ್ರವಾದಿಸು ಮತ್ತು ಹೇಳು, ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಅವರು ನಿನ್ನನ್ನು ಹಾಳುಮಾಡಿ; ಎಲ್ಲಾ ಕಡೆಗಳಿಂದಲೂ ನುಂಗಿಬಿಟ್ಟರು. ಅದು ನೀವು ಅನ್ಯಜನಾಂಗಗಳ ಉಳಿಯುವಿಕೆಗೆ ಸ್ವಾಸ್ತ್ಯವಾಗ ಬೇಕೆಂದು ನೀವು ಮಾತನಾಡುವವರ ತುಟಿಗಳಲ್ಲಿಯೂ ಜನರ ನಿಂದೆಯಲ್ಲಿಯೂ ಮೇಲೆತ್ತಲ್ಪಟ್ಟಿದ್ದೀರಿ;