ಯೆಹೆಜೆಕೇಲ್ 43

ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಮನೆತನದವರಿಗೆ ಈ ಮನೆಯನ್ನು ತೋರಿಸು ಅವರು ತಮ್ಮ ಅಕ್ರಮಗಳ ನಿಮಿತ್ತವಾಗಿ ನಾಚಿಕೆಪಡುವರು ಮತ್ತು ಅವರು ಮಾದರಿಯನ್ನು ಅಳೆಯಲಿ.

Ezekiel 43:10 (UKJV) You son of man, show the house to the house of Israel, that they may be ashamed of their iniquities: and let them measure the pattern.

8ಅವರು ತಮ್ಮ ಹೊಸ್ತಿಲನ್ನು ನನ್ನ ಹೊಸ್ತಿಲುಗಳ ಬಳಿಯಲ್ಲಿಯೂ ತಮ್ಮ ಕಂಬಗಳನ್ನು ನನ್ನ ಕಂಬಗಳ ಬಳಿಯಲ್ಲಿಯೂ ಇಟ್ಟು ನನಗೂ ಅವರಿಗೂ ಮಧ್ಯೆ ಗೋಡೆಯನ್ನು ಹಾಕಿದ್ದರಿಂದಲೂ ಅವರು ತಾವು ಮಾಡಿರುವ ಅಸಹ್ಯಗಳಿಂದ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರಮಾಡಿದ್ದಾರೆ; ಆದಕಾರಣ ನಾನು ನನ್ನ ಕೋಪದಲ್ಲಿ ಅವರನ್ನು ಮುಗಿಸಿ ಬಿಟ್ಟಿದ್ದೇನೆ.

9ಈಗ ಅವರು ಅವರ ವ್ಯಭಿಚಾರವನ್ನು ಮತ್ತು ಅವರ ಅರಸರ ಹೆಣಗಳನ್ನು ನನ್ನಿಂದ ದೂರವಾಗಿಡಲಿ, ನಾನು ಅವರ ಮಧ್ಯದಲ್ಲಿ ಎಂದೆಂದಿಗೂ ವಾಸಿಸುತ್ತೇನೆ ಅಂದನು.

10ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಮನೆತನದವರಿಗೆ ಈ ಮನೆಯನ್ನು ತೋರಿಸು ಅವರು ತಮ್ಮ ಅಕ್ರಮಗಳ ನಿಮಿತ್ತವಾಗಿ ನಾಚಿಕೆಪಡುವರು ಮತ್ತು ಅವರು ಮಾದರಿಯನ್ನು ಅಳೆಯಲಿ.

11ಅವರು ಮಾಡಿದ್ದಕ್ಕಾಗಿ ನಾಚಿಕೆಪಟ್ಟರೆ ಮನೆಯ ರೂಪವನ್ನೂ ಆಕಾರವನ್ನೂ ಹೊರಡೋಣ ಬರೋಣಗಳನ್ನು ಅದರ ಎಲ್ಲಾ ನಿಯಮಗಳನ್ನೂ ಅದರ ಎಲ್ಲಾ ನ್ಯಾಯಪ್ರಮಾಣ ಗಳನ್ನ್ನೂ ಅವರಿಗೆ ತೋರಿಸು; ಅದರ ಎಲ್ಲಾ ನಿಯಮ ಗಳನ್ನೂ ಕೈಗೊಂಡು ಅವರು ಅವುಗಳನ್ನು ಮಾಡುವ ಹಾಗೆ ಅವರ ದೃಷ್ಟಿಯಲ್ಲಿಯೇ ಅವುಗಳನ್ನು ಬರೆ,

12ಇದು ಆ ಆಲಯದ ನ್ಯಾಯಪ್ರಮಾಣವಾಗಿದೆ --ಆ ಪರ್ವತದ ಮೇಲೆಯೂ ಅದರ ಸುತ್ತಲೂ ನಿಗದಿಪಡಿಸಿದವರೆಗೂ ಎಲ್ಲವೂ ಅತ್ಯಂತ ಪರಿಶುದ್ಧ ವಾಗಿದೆ. ಇಗೋ, ಇದೇ ಆ ಆಲಯದ ನ್ಯಾಯ ಪ್ರಮಾಣವಾಗಿದೆ.

Kannada Bible (Old Version), Bible Society of India.