ಯೆಹೆಜೆಕೇಲ್ 44

ಆಮೇಲೆ ಅವನು ನನ್ನನ್ನು ಪೂರ್ವದಿಕ್ಕಿಗೆ ಅಭಿಮುಖವಾದ ಹೊರಗಿನ ಪರಿಶುದ್ದ ಸ್ಥಳದ ಬಾಗಿಲಿನ ಮಾರ್ಗವಾಗಿ ಮತ್ತೆ ಬರಮಾಡಿದನು; ಅದು ಮುಚ್ಚಲ್ಪಟ್ಟಿತ್ತು.

Ezekiel 44:1 (UKJV) Then he brought me back the way of the gate of the outward sanctuary which looks toward the east; and it was shut.

1ಆಮೇಲೆ ಅವನು ನನ್ನನ್ನು ಪೂರ್ವದಿಕ್ಕಿಗೆ ಅಭಿಮುಖವಾದ ಹೊರಗಿನ ಪರಿಶುದ್ದ ಸ್ಥಳದ ಬಾಗಿಲಿನ ಮಾರ್ಗವಾಗಿ ಮತ್ತೆ ಬರಮಾಡಿದನು; ಅದು ಮುಚ್ಚಲ್ಪಟ್ಟಿತ್ತು.

2ಆಮೇಲೆ ಕರ್ತನು ನನಗೆ ಹೇಳಿದ್ದೇನಂದರೆ--ಈ ಬಾಗಿಲು ಮುಚ್ಚಲ್ಪಟ್ಟಿರಬೇಕು, ಇದು ತೆರೆಯಬಾರದು; ಯಾವ ಮನುಷ್ಯನೂ ಇದರಿಂದ ಪ್ರವೇಶಿಸಬಾರದು; ಇಸ್ರಾಯೇಲ್ಯರ ದೇವರಾದ ಕರ್ತನು ಇದರಿಂದ ಪ್ರವೇಶಿಸಿದ್ದಾನೆ. ಆದದರಿಂದ ಇದು ಮುಚ್ಚಲ್ಪಡಬೇಕು.

3ಇದು ಪ್ರಭುವಿಗಾಗಿದೆ; ಪ್ರಭುವು ಅದರೊಳಗೆ ಕುಳಿತುಕೊಂಡು, ಕರ್ತನ ಮುಂದೆ ರೊಟ್ಟಿಯನ್ನು ತಿನ್ನಬೇಕು; ಆತನು ಆ ಬಾಗಿಲಿನ ಪಡಸಾಲೆಯ ಮೂಲಕ ಪ್ರವೇಶಿಸಿ ಅದೇ ಮಾರ್ಗ ವಾಗಿ ಹೊರಗೆ ಹೋಗಬೇಕು.

Kannada Bible (Old Version), Bible Society of India.