ಆದಿಕಾಂಡ 14

ಅವರು ಹನ್ನೆರಡು ವರುಷ ಕೆದೊರ್ಲ ಗೋಮರನಿಗೆ ಸೇವೆಮಾಡಿ ಹದಿಮೂರನೆಯ ವರುಷ ದಲ್ಲಿ ತಿರಿಗಿ ಬಿದ್ದರು.

Genesis 14:4 (UKJV) Twelve years they served Chedorlaomer, and in the thirteenth year they rebelled.

2ಇವರು ಸೊದೋಮಿನ ಅರಸನಾದ ಬೆರಗನೂ ಗೊಮೋರದ ಅರಸನಾದ ಬಿರ್ಶಗನೂ ಅದ್ಮಾಹದ ಅರಸನಾದ ಶಿನಾಬನಿಗೂ ಚೆಬೋಯಾಮಿನ ಅರಸನಾದ ಶಮೇಬರನಿಗೂ ಬೇಲ ಎಂಬ ಚೋಗರದ ಅರಸನಿಗೂ ವಿರೋಧವಾಗಿ ಯುದ್ದಮಾಡಿದರು.

3ಇವರೆಲ್ಲರು ಉಪ್ಪಿನ ಸಮುದ್ರ ವಾಗಿರುವ ಸಿದ್ದೀಮ್‌ ತಗ್ಗಿನಲ್ಲಿ ಒಟ್ಟಾಗಿ ಕೂಡಿ ಬಂದರು.

4ಅವರು ಹನ್ನೆರಡು ವರುಷ ಕೆದೊರ್ಲ ಗೋಮರನಿಗೆ ಸೇವೆಮಾಡಿ ಹದಿಮೂರನೆಯ ವರುಷ ದಲ್ಲಿ ತಿರಿಗಿ ಬಿದ್ದರು.

5ಹದಿನಾಲ್ಕನೆಯ ವರುಷದಲ್ಲಿ ಕೆದೊರ್ಲಗೋಮರನೂ ಅವನ ಸಂಗಡ ಇದ್ದ ಅರಸರೂ ಬಂದು ಅಷ್ಟರೋತ್‌ ಕರ್ನಯಿಮಿನಲ್ಲಿ ರೆಫಾಯರನ್ನೂ ಹಾಮಿನಲ್ಲಿ ಜೂಜ್ಯರನ್ನೂ ಶಾವೆ ಕಿರ್ಯಾತಯಿಮಿನಲ್ಲಿ ಏಮಿಯರನ್ನೂ

6ಅವರ ಬೆಟ್ಟ ವಾದ ಸೇಯಾರಿನಲ್ಲಿ ಹೋರಿಯರನ್ನೂ ಅರಣ್ಯಕ್ಕೆ ಸವಿಾಪವಾದ ಏಲ್ಪಾರಾನಿನ ವರೆಗೂ ಅವರನ್ನು ಸಂಹರಿಸಿದರು.

Kannada Bible (Old Version), Bible Society of India.