20ಇಗೋ, ಈ ಪಟ್ಟಣವನ್ನು ನೋಡು. ನಾನು ಅಲ್ಲಿಗೆ ಓಡಿಹೋಗುವ ಹಾಗೆ ಸವಿಾಪವಾಗಿದೆ ಮತ್ತು ಅದು ಸಣ್ಣದು; ನಾನು ತಪ್ಪಿಸಿಕೊಂಡು ಅಲ್ಲಿಗೆ ಹೋಗುವೆನು; (ಅದು ಸಣ್ಣದಲ್ಲವೋ?) ಹೀಗೆ ನನ್ನ ಪ್ರಾಣವು ಉಳಿಯುವದು ಅಂದನು.
21ಆತನು ಅವನಿಗೆ--ಈ ವಿಷಯದಲ್ಲಿಯೂ ನಾನು ನಿನ್ನ ಬೇಡಿಕೆಯನ್ನು ಅಂಗೀಕರಿಸಿದ್ದೇನೆ, ನೋಡು; ನೀನು ಹೇಳಿದ ಆ ಪಟ್ಟಣವನ್ನು ಕೆಡವಿಹಾಕುವದಿಲ್ಲ.
22ತ್ವರೆಯಾಗಿ ತಪ್ಪಿಸಿಕೊಂಡು ಅಲ್ಲಿಗೆ ಹೋಗು; ಯಾಕಂದರೆ ನೀನು ಅಲ್ಲಿಗೆ ಹೋಗುವ ವರೆಗೆ ನಾನೇನೂ ಮಾಡಲಾರೆನು ಅಂದನು. ಆದದರಿಂದ ಆ ಪಟ್ಟಣಕ್ಕೆ ಚೋಗರ್ ಎಂದು ಹೆಸರಾಯಿತು.
23ಲೋಟನು ಚೋಗರಿಗೆ ಬಂದಾಗ ಭೂಮಿಯ ಮೇಲೆ ಸೂರ್ಯನು ಉದಯಿ ಸಿದನು.
24ಆಗ ಕರ್ತನು ಸೊದೋಮ್ ಮತ್ತು ಗೊಮೋರದ ಮೇಲೆ ಗಂಧಕವನ್ನೂ ಬೆಂಕಿಯನ್ನೂ ಆಕಾಶದಿಂದ ಸುರಿಸಿದನು.