ಆದಿಕಾಂಡ 25

ಏಸಾವನು--ಇಗೋ, ನಾನು ಸಾಯುತ್ತಿದ್ದೇನೆ; ಚೊಚ್ಚಲತನದ ಹಕ್ಕಿನಿಂದ ನನಗೇನು ಲಾಭ ಅಂದನು.

Genesis 25:32 (UKJV) And Esau said, Behold, I am at the point to die: and what profit shall this birthright do to me?

30ಏಸಾವನು ಯಾಕೋಬನಿಗೆ--ಆ ಕೆಂಪಾದ ಪದಾರ್ಥವನ್ನು ತಿನ್ನುವದಕ್ಕೆ ನನಗೆ ಕೊಡು, ನಾನು ದಣಿದಿದ್ದೇನೆ ಅಂದನು. ಆದದರಿಂದ ಅವನಿಗೆ ಎದೋಮ್‌ ಎಂದು ಹೆಸರಾಯಿತು.

31ಆಗ ಯಾಕೋಬನು--ಈ ಹೊತ್ತು ನಿನ್ನ ಚೊಚ್ಚಲತನವನ್ನು ನನಗೆ ಮಾರು ಅಂದನು.

32ಏಸಾವನು--ಇಗೋ, ನಾನು ಸಾಯುತ್ತಿದ್ದೇನೆ; ಚೊಚ್ಚಲತನದ ಹಕ್ಕಿನಿಂದ ನನಗೇನು ಲಾಭ ಅಂದನು.

33ಯಾಕೋಬನು-- ಈ ಹೊತ್ತು ನನಗೆ ಪ್ರಮಾಣಮಾಡು ಅಂದನು. ಆಗ ಅವನು ಯಾಕೋಬನಿಗೆ ಪ್ರಮಾಣಮಾಡಿ ತನ್ನ ಚೊಚ್ಚಲತನವನ್ನು ಅವನಿಗೆ ಮಾರಿದನು.

34ಆಗ ಯಾಕೋಬನು ಏಸಾವನಿಗೆ ರೊಟ್ಟಿಯನ್ನೂ ಅಲಸಂದಿಯ ತೋವೆಯನ್ನೂ ಕೊಟ್ಟನು. ಅವನು ತಿಂದು ಕುಡಿದು ಎದ್ದುಹೋದನು. ಹೀಗೆ ಏಸಾವನು ತನ್ನ ಚೊಚ್ಚಲತನದ ಹಕ್ಕನ್ನು ಉದಾಸೀನಮಾಡಿದನು.

Kannada Bible (Old Version), Bible Society of India.