15ತರುವಾಯ ಲಾಬಾನನು ಯಾಕೋಬನಿಗೆ--ನೀನು ನನ್ನ ಸಹೋದರ ಸಂಬಂಧಿಯಾಗಿರುವದರಿಂದ ಸುಮ್ಮನೆ ನನ್ನನ್ನು ಸೇವಿಸತಕ್ಕದ್ದೋ? ನಿನ್ನ ಸಂಬಳ ಎಷ್ಟೆಂಬದನ್ನು ನನಗೆ ಹೇಳು ಅಂದನು.
16ಲಾಬಾನನಿಗೆ ಇಬ್ಬರು ಕುಮಾರ್ತೆಯರಿದ್ದರು. ಹಿರಿಯಳ ಹೆಸರು ಲೇಯಳು, ಕಿರಿಯಳ ಹೆಸರು ರಾಹೇಲಳು.
17ಲೇಯಳ ಕಣ್ಣುಗಳು ಮೃದುವಾಗಿದ್ದವು; ಆದರೆ ರಾಹೇಲಳು ಬಹು ಸುಂದರಿಯೂ ರೂಪವತಿಯೂ ಆಗಿದ್ದಳು.
18ಹೀಗಿರುವದರಿಂದ ಯಾಕೋಬನು ರಾಹೇಲಳನ್ನು ಪ್ರೀತಿಮಾಡಿ--ನಾನು ನಿನ್ನ ಕಿರಿಮಗಳಾಗಿರುವ ರಾಹೇಲಳಿಗೋಸ್ಕರ ನಿನ್ನಲ್ಲಿ ಏಳು ವರುಷ ಸೇವೆ ಮಾಡುತ್ತೇನೆ ಅಂದನು.
19ಅದಕ್ಕೆ ಲಾಬಾನನು--ಅವಳನ್ನು ಬೇರೊಬ್ಬನಿಗೆ ಕೊಡುವದಕ್ಕಿಂತ ನಿನಗೆ ಕೊಡುವದು ಒಳ್ಳೆಯದು. ಆದದರಿಂದ ನನ್ನ ಸಂಗಡ ವಾಸವಾಗಿರು ಅಂದನು.