33ಮತ್ತೆ ಆಕೆಯು ಗರ್ಭಿಣಿಯಾಗಿ ಮಗನನ್ನು ಹೆತ್ತು--ನಾನು ತಾತ್ಸಾರ ಮಾಡಲ್ಪಟ್ಟೆನೆಂದು ಕರ್ತನು ಕೇಳಿ ಇವನನ್ನು ನನಗೆ ಕೊಟ್ಟಿದ್ದಾನೆ ಎಂದು ಹೇಳಿ ಅವನಿಗೆ ಸಿಮೆಯೋನ ಎಂದು ಹೆಸರಿಟ್ಟಳು.
34ತಿರಿಗಿ ಆಕೆಯು ಮಗನನ್ನು ಹೆತ್ತು ಈಗಲಾದರೂ ನನ್ನ ಗಂಡನು ನನ್ನೊಂದಿಗೆ ಒಂದಾಗುವನು. ಯಾಕಂದರೆ ನಾನು ಅವನಿಗೆ ಮೂರು ಪುತ್ರರನ್ನು ಹೆತ್ತಿದ್ದೇನೆ; ಆದದರಿಂದ ಅವನಿಗೆ ಲೇವಿ ಎಂದು ಕರೆದಳು.
35ಆಕೆಯು ಮತ್ತೆ ಗರ್ಭಿಣಿಯಾಗಿ ಮಗನನ್ನು ಹೆತ್ತು--ಈಗ ನಾನು ಕರ್ತನನ್ನು ಸ್ತುತಿಸುವೆನು ಎಂದು ಹೇಳಿ ಅವನಿಗೆ ಯೆಹೂದನೆಂದು ಹೆಸರಿಟ್ಟಳು. ಆಕೆಯು ಹೆರುವದು ನಿಂತುಹೋಯಿತು.