33ಯಾಕೋಬನು ಅದನ್ನು ಗುರುತು ಹಿಡಿದು--ಇದು ನನ್ನ ಮಗನ ಅಂಗಿ ಹೌದು; ದುಷ್ಟಮೃಗವು ಅವನನ್ನು ತಿಂದುಬಿಟ್ಟಿತು; ಯೋಸೇಫನು ನಿಸ್ಸಂದೇಹವಾಗಿ ತುಂಡು ತುಂಡಾಗಿ ಮಾಡಲ್ಪಟ್ಟಿದ್ದಾನೆ ಅಂದನು.
34ಆಗ ಯಾಕೋಬನು ತನ್ನ ವಸ್ತ್ರಗಳನ್ನು ಹರಿದುಕೊಂಡು ತನ್ನ ನಡುವಿಗೆ ಗೋಣಿಯನ್ನು ಕಟ್ಟಿಕೊಂಡು ತನ್ನ ಮಗನಿಗೋಸ್ಕರ ಬಹುದಿನ ದುಃಖಪಟ್ಟನು.
35ಅವನ ಕುಮಾರ ಕುಮಾರ್ತೆಯರೆಲ್ಲಾ ಅವನನ್ನು ಆದರಿಸಿದಾಗ್ಯೂ ಅವನು ಆದರಣೆ ಹೊಂದಲೊಲ್ಲದೆ--ನನ್ನ ಮಗನ ಬಳಿಗೆ ಸಮಾಧಿಗೆ ದುಃಖದಿಂದಲೇ ಇಳಿದು ಹೋಗು ವೆನು ಅಂದನು. ಹೀಗೆ ಅವನ ತಂದೆ ಅವನಿಗೋಸ್ಕರ ಅತ್ತನು.
36ಇದಲ್ಲದೆ ಆ ಮಿದ್ಯಾನ್ಯರು ಯೋಸೇಫನನ್ನು ಐಗುಪ್ತದಲ್ಲಿ ಫರೋಹನ ಉದ್ಯೋಗಸ್ಥನಾದ ಪೋಟೀಫರನಿಗೆ ಮಾರಿದನು. ಅವನು ಮೈಗಾವಲಿನ ದಳವಾಯಿಯಾಗಿದ್ದನು.