1ಆದಾಮನು ತನ್ನ ಹೆಂಡತಿಯಾದ ಹವ್ವಳನ್ನು ಕೂಡಿದನು. ಆಗ ಆಕೆಯು ಗರ್ಭಿಣಿಯಾಗಿ ಕಾಯಿನನನ್ನು ಹೆತ್ತು--ನಾನು ಕರ್ತ ನಿಂದ ಒಬ್ಬ ಮನುಷ್ಯನನ್ನು ಪಡೆದಿದ್ದೇನೆ ಅಂದಳು.
2ತರುವಾಯ ಆಕೆಯು ಅವನ ಸಹೋದರನಾದ ಹೇಬೆಲನನ್ನು ಹೆತ್ತಳು. ಹೇಬೆಲನು ಕುರಿ ಕಾಯುವವನಾ ದನು, ಕಾಯಿನನು ವ್ಯವಸಾಯಮಾಡುವವನಾದನು.
3ಕಾಲಾಂತರದಲ್ಲಿ ಸಂಭವಿಸಿದ್ದೇನಂದರೆ, ಕಾಯಿ ನನು ಹೊಲದ ಫಲವನ್ನು ಕರ್ತನಿಗೆ ಕಾಣಿಕೆಯಾಗಿ ತಂದನು.