1ಶಿಗ್ಯೋನೋತನ ಮೇಲೆ ಪ್ರವಾದಿಯಾದ ಹಬಕ್ಕೂಕನ ಪ್ರಾರ್ಥನೆ. ಕರ್ತನೇ, ನಿನ್ನ ಮಾತನ್ನು ಕೇಳಿ ಭಯಪಟ್ಟಿದ್ದೇನೆ.
2ಕರ್ತನೇ, ವರುಷ ಗಳ ಮಧ್ಯದಲ್ಲಿ ನಿನ್ನ ಕೆಲಸವನ್ನು ಉಜ್ಜೀವಿಸಮಾಡು. ವರುಷಗಳ ಮಧ್ಯದಲ್ಲಿ ತಿಳಿಯಮಾಡು, ರೌದ್ರದಲ್ಲಿ ಕರುಣೆಯನ್ನು ಜ್ಞಾಪಕಮಾಡು;
3ದೇವರು ತೇಮಾನಿ ನಿಂದಲೂ ಪರಿಶುದ್ಧನು ಪಾರಾನ್ ಪರ್ವತದಿಂದಲೂ ಬಂದನು. ಸೆಲಾ. ಆತನ ಮಹಿಮೆ ಆಕಾಶಗಳನ್ನು ಮುಚ್ಚಿತು: ಆತನ ಸ್ತೋತ್ರವು ಭೂಮಿಯನ್ನು ತುಂಬಿ ಸಿತು.