ಯಿರ್ಮಿಯ 13

ಇದೇ ನಿನ್ನ ಭಾಗವು, ನನ್ನಿಂದ ನಿನಗೆ ಅಳತೆ ಮಾಡಿದ ಪಾಲು ಎಂದು ಕರ್ತನು ಅನ್ನುತ್ತಾನೆ; ನನ್ನನ್ನು ಮರೆತುಬಿಟ್ಟು ಸುಳ್ಳಿನಲ್ಲಿ ಭರವಸವಿಟ್ಟಿದ್ದಿ.

Jeremiah 13:25 (UKJV) This is your lot, the portion of your measures from me, says the LORD; because you have forgotten me, and trusted in falsehood.

23ಕೂಷ್ಯನು ತನ್ನ ಚರ್ಮವನ್ನೂ ಚಿರತೆಯು ತನ್ನ ಮಚ್ಚೆಗಳನ್ನೂ ಮಾರ್ಪಡಿಸುವದಕ್ಕಾಗುವದೋ? ಹಾಗಾದರೆ ಕೆಟ್ಟ ತನದ ಅಭ್ಯಾಸವುಳ್ಳವರಾದ ನೀವು ಸಹ ಒಳ್ಳೆದನ್ನು ಹೇಗೆ ಮಾಡುವದಕ್ಕಾದೀತು.

24ಆದಕಾರಣ ಅಡವಿಯ ಗಾಳಿಯಿಂದ ಹಾರಿ ಹೋಗುವ ಹುಲ್ಲಿನಂತೆ ಅವರನ್ನು ಚದರಿಸುವೆನು.

25ಇದೇ ನಿನ್ನ ಭಾಗವು, ನನ್ನಿಂದ ನಿನಗೆ ಅಳತೆ ಮಾಡಿದ ಪಾಲು ಎಂದು ಕರ್ತನು ಅನ್ನುತ್ತಾನೆ; ನನ್ನನ್ನು ಮರೆತುಬಿಟ್ಟು ಸುಳ್ಳಿನಲ್ಲಿ ಭರವಸವಿಟ್ಟಿದ್ದಿ.

26ಆದದರಿಂದ ನಾನು ನಿನ್ನ ಬಟ್ಟೆಗಳನ್ನು ನಿನ್ನ ನಾಚಿಕೆ ಕಾಣುವ ಹಾಗೆ ನಿನ್ನ ಮುಖದ ಮೇಲೆ ಎತ್ತುವೆನು.

27ನಿನ್ನ ವ್ಯಭಿಚಾರಗಳನ್ನೂ ಬುಸುಗುಟ್ಟು ವಿಕೆಗಳನ್ನೂ ಸೂಳೆತನದ ದೋಷವನ್ನೂ ಹೊಲಗಳ ಲ್ಲಿರುವ ಗುಡ್ಡಗಳ ಮೇಲೆ ಆಗುವ ನಿನ್ನ ಅಸಹ್ಯಗಳನ್ನೂ ನೋಡಿದ್ದೇನೆ, ಓ ಯೆರೂಸಲೇಮೇ, ನಿನಗೆ ಅಯ್ಯೋ, ನೀನು ಶುದ್ಧವಾಗುವದಿಲ್ಲವೋ? ಒಂದು ಸಾರಿ ಇದು ಯಾವಾಗ ಆದೀತು?

Kannada Bible (Old Version), Bible Society of India.