8ಅನೇಕ ಜನಾಂಗಗಳು ಈ ಪಟ್ಟಣವನ್ನು ಹಾದುಹೋಗುವರು, ಕರ್ತನು ಈ ದೊಡ್ಡ ಪಟ್ಟಣಕ್ಕೆ ಯಾಕೆ ಈ ಪ್ರಕಾರ ಮಾಡಿ ದ್ದಾನೆಂದು ನೆರೆಯವರು ಒಬ್ಬರಿಗೊಬ್ಬರು ಹೇಳಿಕೊಳ್ಳು ವರು.
9ಆಗ ಅವರು--ತಮ್ಮ ದೇವರಾದ ಕರ್ತನ ಒಡಂಬಡಿಕೆಯನ್ನು ಬಿಟ್ಟು, ಬೇರೆ ದೇವರುಗಳಿಗೆ ನಮ ಸ್ಕರಿಸಿ ಸೇವಿಸಿದ್ದರಿಂದಲೇ ಎಂದು ಅವರು ಉತ್ತರ ಕೊಡುವರು.
10ಸತ್ತವನಿಗಾಗಿ ಅಳಬೇಡಿರಿ; ಅವನಿಗಾಗಿ ಗೋಳಾ ಡಬೇಡಿರಿ; ಹೊರಟುಹೋದವನಿಗಾಗಿ ಬಹಳವಾಗಿ ಅಳಿರಿ. ಅವನು ತಿರುಗಿ ಬರುವದೇ ಇಲ್ಲ. ತಾನು ಹುಟ್ಟಿದ ದೇಶವನ್ನು ಇನ್ನು ನೋಡುವದೇ ಇಲ್ಲ.
11ಯೆಹೂದದ ಅರಸನಾದ ಯೋಷೀಯನ ಮಗನು ತನ್ನ ತಂದೆಯಾದ ಯೋಷೀಯನಿಗೆ ಬದಲಾಗಿ ಆಳಿದವನೂ ಈ ಸ್ಥಳವನ್ನು ಬಿಟ್ಟು ಹೋದವನೂ ಆದ ಶಲ್ಲೂಮನನ್ನು ಕುರಿತು ಕರ್ತನು ಹೀಗೆ ಹೇಳು ತ್ತಾನೆ--ಅವನು ಇನ್ನು ಇಲ್ಲಿಗೆ ತಿರುಗಿ ಬರುವದೇ ಇಲ್ಲ.
12ಅವರು ಅವನನ್ನು ಸೆರೆಯಾಗಿ ಒಯ್ದ ಸ್ಥಳದ ಲ್ಲಿಯೇ ಸಾಯುವನು; ಈ ದೇಶವನ್ನು ಇನ್ನು ನೋಡು ವದೇ ಇಲ್ಲ;