1ಇದಲ್ಲದೆ ಯೆರೆವಿಾಯನು ಇನ್ನೂ ಸೆರೆಮನೆಯ ಅಂಗಳದಲ್ಲಿ ಮುಚ್ಚಲ್ಪಟ್ಟಿರು ವಾಗ ಕರ್ತನ ವಾಕ್ಯವು ಎರಡನೇ ಸಾರಿ ಉಂಟಾಯಿತು.
2ಹೇಗಂದರೆ--ಅದನ್ನು ಮಾಡುವ ಕರ್ತನೂ ಅದನ್ನು ಸ್ಥಾಪಿಸುವದಕ್ಕಾಗಿ ಅದನ್ನು ರೂಪಿಸಿದ ಕರ್ತನೂ ಕರ್ತನೆಂಬ ಹೆಸರುಳ್ಳಾತನೂ ಹೇಳುವದೇನಂದರೆ-
3ನನ್ನನ್ನು ಕರೆ, ಆಗ ನಿನಗೆ ಉತ್ತರ ಕೊಡುವೆನು; ನಿನಗೆ ತಿಳಿಯದ ದೊಡ್ಡ ಮಹತ್ತಾದವುಗಳನ್ನು ನಿನಗೆ ತಿಳಿಸುವೆನು.
4ದಿಬ್ಬಗಳಿಂದಲೂ ಕತ್ತಿಯಿಂದಲೂ ಕೆಡವಿ ಹಾಕಲ್ಪಟ್ಟ ಈ ಪಟ್ಟಣದ ಮನೆಗಳ ವಿಷಯವೂ ಯೆಹೂದದ ಅರಸರ ಮನೆಗಳ ವಿಷಯವೂ ಇಸ್ರಾ ಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ--
5ಅವರು ಕಸ್ದೀಯರ ಸಂಗಡ ಯುದ್ಧಮಾಡುವದಕ್ಕೂ ನಾನು ನನ್ನ ಕೋಪದಲ್ಲಿಯೂ ನನ್ನ ಉರಿಯಲ್ಲಿಯೂ ಕೊಂದುಹಾಕಿದ ಮನುಷ್ಯರ ಹೆಣಗಳಿಂದ ಅವುಗಳನ್ನು ತುಂಬಿಸುವದಕ್ಕೂ ಬರುತ್ತಾರೆ; ನಾನು ಈ ಪಟ್ಟಣಕ್ಕೆ ವಿರೋಧವಾಗಿ ಅದರ ಸಮಸ್ತ ಕೆಟ್ಟತನದ ನಿಮಿತ್ತ ನನ್ನ ಮುಖವನ್ನು ಮರೆಮಾಡಿದ್ದೇನೆ.