ಯಿರ್ಮಿಯ 36

ಯೆಹೂದದ ಅರಸನಾದ ಯೆಹೋಯಾಕೀಮನಿಗೆ ನೀನು ಹೇಳತಕ್ಕದ್ದೇನಂದರೆ--ಕರ್ತನು ಹೀಗೆ ಹೇಳು ತ್ತಾನೆ--ಬಾಬೆಲಿನ ಅರಸನು ನಿಶ್ಚಯವಾಗಿ ಬಂದು ಈ ದೇಶವನ್ನು ನಾಶಮಾಡಿ ಮನುಷ್ಯರನ್ನೂ ಪ್ರಾಣ ಗಳನ್ನೂ ಅದರೊಳಗಿಂದ ಹಾಳು ಮಾಡುವದು ಖಂಡಿತ ಎಂದು ಇದರಲ್ಲಿ ಯಾಕೆ ಬರೆದಿದ್ದೀ ಎಂದು ಹೇಳಿ ನೀನು ಈ ಸುರಳಿಯನ್ನು ಸುಟ್ಟಿದ್ದೀ.

Jeremiah 36:29 (UKJV) And you shall say to Jehoiakim king of Judah, Thus says the LORD; You have burned this roll, saying, Why have you written therein, saying, The king of Babylon shall certainly come and destroy this land, and shall cause to cease from thence man and beast?

27ಆಗ ಅರಸನು ಆ ಸುರಳಿಯನ್ನೂ ಬಾರೂಕನು ಯೆರೆವಿಾಯನ ಬಾಯಿಂದ ಬರೆದಿದ್ದ ವಾಕ್ಯಗಳನ್ನೂ ಸುಟ್ಟಮೇಲೆ ಕರ್ತನ ವಾಕ್ಯವು ಯೆರೆವಿಾಯನಿಗೆ ಉಂಟಾಗಿ ಹೇಳಿದ್ದೇನಂದರೆ--

28ನೀನು ಮತ್ತೊಂದು ಸುರಳಿಯನ್ನು ತಕ್ಕೊಂಡು ಯೆಹೂದದ ಅರಸನಾದ ಯೆಹೋಯಾಕೀಮನು ಸುಟ್ಟ ಮೊದಲನೆಯ ಸುರಳಿ ಯಲ್ಲಿದ್ದ ಮುಂಚಿನ ವಾಕ್ಯಗಳನ್ನೆಲ್ಲಾ ಅದರಲ್ಲಿ ಬರೆ.

29ಯೆಹೂದದ ಅರಸನಾದ ಯೆಹೋಯಾಕೀಮನಿಗೆ ನೀನು ಹೇಳತಕ್ಕದ್ದೇನಂದರೆ--ಕರ್ತನು ಹೀಗೆ ಹೇಳು ತ್ತಾನೆ--ಬಾಬೆಲಿನ ಅರಸನು ನಿಶ್ಚಯವಾಗಿ ಬಂದು ಈ ದೇಶವನ್ನು ನಾಶಮಾಡಿ ಮನುಷ್ಯರನ್ನೂ ಪ್ರಾಣ ಗಳನ್ನೂ ಅದರೊಳಗಿಂದ ಹಾಳು ಮಾಡುವದು ಖಂಡಿತ ಎಂದು ಇದರಲ್ಲಿ ಯಾಕೆ ಬರೆದಿದ್ದೀ ಎಂದು ಹೇಳಿ ನೀನು ಈ ಸುರಳಿಯನ್ನು ಸುಟ್ಟಿದ್ದೀ.

30ಆದದರಿಂದ ಯೆಹೂದದ ಅರಸನಾದ ಯೆಹೋಯಾಕೀಮನನ್ನು ಕುರಿತು ಕರ್ತನು ಹೇಳುವದೇನಂದರೆ--ದಾವೀದನ ಸಿಂಹಾಸನದಲ್ಲಿ ಕೂತುಕೊಳ್ಳುವವನು ಅವನಿಗೆ ಇರು ವದಿಲ್ಲ; ಅವನ ಹೆಣವು ಹಗಲಿನಲ್ಲಿ ಬಿಸಲಿಗೂ ರಾತ್ರಿಯಲ್ಲಿ ಹಿಮಕ್ಕೂ ಬಿಸಾಡಲ್ಪಡುವದು.

31ಅವ ನನ್ನೂ ಅವನ ಸಂತಾನವನ್ನೂ ಸೇವಕರನ್ನೂ ಅವರ ಅಕ್ರಮಕ್ಕಾಗಿ ದಂಡಿಸುವೆನು; ಅವರ ಮೇಲೆಯೂ ಯೆರೂಸಲೇಮಿನ ನಿವಾಸಿಗಳ ಮೇಲೆಯೂ ಯೆಹೂದದ ಮನುಷ್ಯರ ಮೇಲೆಯೂ ನಾನು ಅವರಿಗೆ ವಿರೋಧವಾಗಿ ಮಾತಾಡಿದಂಥ ಅವರು ಕಿವಿಗೊಡ ದಂಥ ಕೇಡನ್ನೆಲ್ಲಾ ಬರಮಾಡುವೆನು.

Kannada Bible (Old Version), Bible Society of India.