ಯಿರ್ಮಿಯ 43

ಅವರು ನಮ್ಮನ್ನು ಕೊಂದುಹಾಕುವಂತೆ ನಮ್ಮನ್ನು ಬಾಬೆಲಿಗೆ ಸೆರೆ ಒಯ್ಯುವ ಹಾಗೆ ನಮ್ಮನ್ನು ಕಸ್ದೀಯರ ಕೈಗೆ ಒಪ್ಪಿಸಬೇಕೆಂದು ನೇರೀಯನ ಮಗನಾದ ಬಾರೂ ಕನು ನಿನ್ನನ್ನು ನಮಗೆ ವಿರೋಧವಾಗಿ ಪ್ರೇರಿಸಿದ್ದಾನೆ ಅಂದರು.

Jeremiah 43:3 (UKJV) But Baruch the son of Neriah sets you on against us, in order to deliver us into the hand of the Chaldeans, that they might put us to death, and carry us away captives into Babylon.

1ಯೆರೆವಿಾಯನು ಜನರೆಲ್ಲರಿಗೆ ಅವರ ದೇವರಾದ ಕರ್ತನ ಮಾತುಗಳನ್ನೂ, ಅವರ ದೇವರಾದ ಕರ್ತನು ಯಾವವುಗಳ ವಿಷಯ ವಾಗಿ ಅವನನ್ನು ಅವರ ಬಳಿಗೆ ಕಳುಹಿಸಿದ್ದನೋ ಆ ಮಾತುಗಳನ್ನೆಲ್ಲಾ ಹೇಳಿ ಮುಗಿಸಿದಾಗ

2ಹೋಷಾಯನ ಮಗನಾದ ಅಜರ್ಯನೂ ಕಾರೇಹನ ಮಗನಾದ ಯೋಹಾನಾನನೂ ಗರ್ವಿಷ್ಠ ಮನುಷ್ಯ ರೆಲ್ಲರೂ ಮಾತನಾಡಿ ಯೆರೆವಿಾಯನಿಗೆ ಹೇಳಿದ್ದೇ ನಂದರೆ-ನೀನು ಸುಳ್ಳು ಹೇಳುತ್ತೀ, ಅಲ್ಲಿ ಪ್ರವಾಸಿಯಾ ಗಿರುವದಕ್ಕೆ ಐಗುಪ್ತಕ್ಕೆ ಹೋಗಬಾರದೆಂದು ಹೇಳುವದಕ್ಕೆ ನಮ್ಮ ದೇವರಾದ ಕರ್ತನು ನಿನ್ನನ್ನು ಕಳುಹಿಸಲಿಲ್ಲ.

3ಅವರು ನಮ್ಮನ್ನು ಕೊಂದುಹಾಕುವಂತೆ ನಮ್ಮನ್ನು ಬಾಬೆಲಿಗೆ ಸೆರೆ ಒಯ್ಯುವ ಹಾಗೆ ನಮ್ಮನ್ನು ಕಸ್ದೀಯರ ಕೈಗೆ ಒಪ್ಪಿಸಬೇಕೆಂದು ನೇರೀಯನ ಮಗನಾದ ಬಾರೂ ಕನು ನಿನ್ನನ್ನು ನಮಗೆ ವಿರೋಧವಾಗಿ ಪ್ರೇರಿಸಿದ್ದಾನೆ ಅಂದರು.

4ಈ ಪ್ರಕಾರ ಕಾರೇಹನ ಮಗನಾದ ಯೋಹಾನಾನನೂ ಸೈನ್ಯಾಧಿಪತಿಗಳೂ ಜನರೆಲ್ಲರೂ ಯೆಹೂದ ದೇಶದಲ್ಲಿ ವಾಸಮಾಡುವ ಹಾಗೆ ಕರ್ತನ ಮಾತಿಗೆ ಕಿವಿಗೊಡಲಿಲ್ಲ.

5ಆದರೆ ಕಾರೇಹನ ಮಗನಾದ ಯೋಹಾನಾನನೂ ಸೈನ್ಯಾಧಿಪತಿಗಳೆಲ್ಲರೂ ತಾವು ಅಟ್ಟಿ ಬಿಟ್ಟಿದ್ದ ಎಲ್ಲಾ ಜನಾಂಗಗಳಿಂದ ಯೆಹೂದ ದೇಶದಲ್ಲಿ ವಾಸಮಾಡುವದಕ್ಕೆ ತಿರಿಗಿ ಬಂದ ಯೆಹೂದದಲ್ಲಿ ಉಳಿದವರನ್ನು

Kannada Bible (Old Version), Bible Society of India.