ಯಿರ್ಮಿಯ 43

ಈ ಪ್ರಕಾರ ಕಾರೇಹನ ಮಗನಾದ ಯೋಹಾನಾನನೂ ಸೈನ್ಯಾಧಿಪತಿಗಳೂ ಜನರೆಲ್ಲರೂ ಯೆಹೂದ ದೇಶದಲ್ಲಿ ವಾಸಮಾಡುವ ಹಾಗೆ ಕರ್ತನ ಮಾತಿಗೆ ಕಿವಿಗೊಡಲಿಲ್ಲ.

Jeremiah 43:4 (UKJV) So Johanan the son of Kareah, and all the captains of the forces, and all the people, obeyed not the voice of the LORD, to dwell in the land of Judah.

2ಹೋಷಾಯನ ಮಗನಾದ ಅಜರ್ಯನೂ ಕಾರೇಹನ ಮಗನಾದ ಯೋಹಾನಾನನೂ ಗರ್ವಿಷ್ಠ ಮನುಷ್ಯ ರೆಲ್ಲರೂ ಮಾತನಾಡಿ ಯೆರೆವಿಾಯನಿಗೆ ಹೇಳಿದ್ದೇ ನಂದರೆ-ನೀನು ಸುಳ್ಳು ಹೇಳುತ್ತೀ, ಅಲ್ಲಿ ಪ್ರವಾಸಿಯಾ ಗಿರುವದಕ್ಕೆ ಐಗುಪ್ತಕ್ಕೆ ಹೋಗಬಾರದೆಂದು ಹೇಳುವದಕ್ಕೆ ನಮ್ಮ ದೇವರಾದ ಕರ್ತನು ನಿನ್ನನ್ನು ಕಳುಹಿಸಲಿಲ್ಲ.

3ಅವರು ನಮ್ಮನ್ನು ಕೊಂದುಹಾಕುವಂತೆ ನಮ್ಮನ್ನು ಬಾಬೆಲಿಗೆ ಸೆರೆ ಒಯ್ಯುವ ಹಾಗೆ ನಮ್ಮನ್ನು ಕಸ್ದೀಯರ ಕೈಗೆ ಒಪ್ಪಿಸಬೇಕೆಂದು ನೇರೀಯನ ಮಗನಾದ ಬಾರೂ ಕನು ನಿನ್ನನ್ನು ನಮಗೆ ವಿರೋಧವಾಗಿ ಪ್ರೇರಿಸಿದ್ದಾನೆ ಅಂದರು.

4ಈ ಪ್ರಕಾರ ಕಾರೇಹನ ಮಗನಾದ ಯೋಹಾನಾನನೂ ಸೈನ್ಯಾಧಿಪತಿಗಳೂ ಜನರೆಲ್ಲರೂ ಯೆಹೂದ ದೇಶದಲ್ಲಿ ವಾಸಮಾಡುವ ಹಾಗೆ ಕರ್ತನ ಮಾತಿಗೆ ಕಿವಿಗೊಡಲಿಲ್ಲ.

5ಆದರೆ ಕಾರೇಹನ ಮಗನಾದ ಯೋಹಾನಾನನೂ ಸೈನ್ಯಾಧಿಪತಿಗಳೆಲ್ಲರೂ ತಾವು ಅಟ್ಟಿ ಬಿಟ್ಟಿದ್ದ ಎಲ್ಲಾ ಜನಾಂಗಗಳಿಂದ ಯೆಹೂದ ದೇಶದಲ್ಲಿ ವಾಸಮಾಡುವದಕ್ಕೆ ತಿರಿಗಿ ಬಂದ ಯೆಹೂದದಲ್ಲಿ ಉಳಿದವರನ್ನು

6ಅಂದರೆ ಗಂಡಸರನ್ನೂ ಹೆಂಗಸರನ್ನೂ ಮಕ್ಕಳನ್ನೂ ಅರಸನ ಕುಮಾರ್ತೆಯ ರನ್ನೂ ಕಾವಲಿನವರ ಅಧಿಪತಿಯಾದ ನೆಬೂಜರದಾ ನನು ಶಾಫಾನನ ಮಗನಾದ ಅಹೀಕಾಮನ ಮಗನಾದ ಗೆದಲ್ಯನ ಸಂಗಡ ಬಿಟ್ಟವರೆಲ್ಲರನ್ನೂ ಪ್ರವಾದಿಯಾದ ಯೆರೆವಿಾಯನನ್ನೂ ನೇರೀಯನ ಮಗನಾದ ಬಾರೂಕನನ್ನೂ ತೆಗೆದುಕೊಂಡು ಐಗುಪ್ತದೇಶಕ್ಕೆ ಹೋದರು.

Kannada Bible (Old Version), Bible Society of India.