ಯಿರ್ಮಿಯ 44

ಆದರೆ ನಾವು ಗಗನದ ಒಡತಿಗೆ ಧೂಪ ಸುಡುವ ದನ್ನೂ ಪಾನದರ್ಪಣೆಗಳನ್ನೂ ಅವಳಿಗೆ ಹೊಯ್ಯುವ ದನ್ನೂ ಬಿಟ್ಟಂದಿನಿಂದ ನಮಗೆ ಎಲ್ಲಾ ಸಾಲದೆ ಹೋಯಿತು ಕತ್ತಿಯಿಂದಲೂ ಕ್ಷಾಮದಿಂದಲೂ ನಿರ್ಮೂಲವಾದೆವು.

Jeremiah 44:18 (UKJV) But since we left off to burn incense to the queen of heaven, and to pour out drink offerings unto her, we have wanted all things, and have been consumed by the sword and by the famine.

16ನೀನು ಕರ್ತನ ಹೆಸರಿನಲ್ಲಿ ನಮ್ಮ ಸಂಗಡ ಮಾತನಾಡಿದ ಮಾತಿನ ವಿಷಯದಲ್ಲಿ ನಾವು ನಿನ್ನನ್ನು ಕೇಳುವದಿಲ್ಲ.

17ಆದರೆ ಸ್ವಂತ ಬಾಯಿಂದ ಹೊರಡು ವವೆಲ್ಲವನ್ನೂ ಖಂಡಿತವಾಗಿ ಮಾಡುತ್ತೇವೆ; ಗಗನದ ಒಡತಿಗೆ ಧೂಪ ಸುಡುತ್ತೇವೆ. ಪಾನದರ್ಪಣೆಗಳನ್ನು ಅವಳಿಗೆ ಹೊಯ್ಯುತ್ತೇವೆ, ನಮ್ಮ ತಂದೆಗಳೂ ನಮ್ಮ ಅರಸರೂ ನಮ್ಮ ಪ್ರಧಾನರೂ ಯೆಹೂದದ ಪಟ್ಟಣ ಗಳಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ ಮಾಡಿದ ಪ್ರಕಾರವೇ ನಾವೂ ಮಾಡುವೆವು; ಆಗ ಆಹಾರದಿಂದ ಚೆನ್ನಾಗಿದ್ದೆವು, ಕೇಡು ನೋಡಲಿಲ್ಲ.

18ಆದರೆ ನಾವು ಗಗನದ ಒಡತಿಗೆ ಧೂಪ ಸುಡುವ ದನ್ನೂ ಪಾನದರ್ಪಣೆಗಳನ್ನೂ ಅವಳಿಗೆ ಹೊಯ್ಯುವ ದನ್ನೂ ಬಿಟ್ಟಂದಿನಿಂದ ನಮಗೆ ಎಲ್ಲಾ ಸಾಲದೆ ಹೋಯಿತು ಕತ್ತಿಯಿಂದಲೂ ಕ್ಷಾಮದಿಂದಲೂ ನಿರ್ಮೂಲವಾದೆವು.

19ಇದಲ್ಲದೆ ನಾವು ಗಗನದ ಒಡತಿಗೆ ಧೂಪಸುಟ್ಟು, ಅವಳಿಗೆ ಪಾನದರ್ಪಣೆ ಹೊಯ್ದಾಗ ನಮ್ಮ ಗಂಡಂದಿರನ್ನು ಬಿಟ್ಟು ಅವಳ ಪೂಜೆ ಗೋಸ್ಕರ ದೋಸೆಗಳನ್ನು ಮಾಡಿ ಅವಳಿಗೆ ಪಾನ ದರ್ಪಣೆಗಳನ್ನೂ ಹೊಯಿದೆವಲ್ಲವೋ?

20ಆಗ ಯೆರೆ ವಿಾಯನು ಗಂಡಸರಿಗೂ ಹೆಂಗಸರಿಗೂ ತನಗೆ ಉತ್ತರ ವನ್ನು ಕೊಟ್ಟಿದ್ದ ಜನರೆಲ್ಲರಿಗೂ ಹೇಳಿದ್ದೇನಂದರೆ--

Kannada Bible (Old Version), Bible Society of India.