10ಆದದರಿಂದ ನನ್ನನ್ನು ಕೇಳು; ನನ್ನ ಅಭಿಪ್ರಾಯವನ್ನು ನಾನು ತಿಳಿಸುವೆನು ಅಂದೆನು.
11ಇಗೋ, ನಿಮ್ಮ ಮಾತುಗಳಿಗೋಸ್ಕರ ನಾನು ಎದುರು ನೋಡಿದೆನು; ನೀವು ಏನು ಹೇಳಬೇಕೆಂದು ಹುಡುಕುತ್ತಿದ್ದಾಗ, ನಿಮ್ಮ ವಿವಾದಗಳಿಗೆ ಕಿವಿಗೊಟ್ಟೆನು;
12ಆದರೆ ಇಗೋ, ಯೋಬನನ್ನು ಮನಗಾಣಿಸುವವನೂ ಅವನ ಮಾತು ಗಳಿಗೆ ಉತ್ತರ ಕೊಡುವವನೂ ನಿಮ್ಮಲ್ಲಿ ಒಬ್ಬನೂ ಇಲ್ಲ.
13ನಾವು ಜ್ಞಾನವನ್ನು ಕಂಡುಕೊಂಡೆವು; ಮನು ಷ್ಯನಲ್ಲ, ದೇವರು ಅವನನ್ನು ತಳ್ಳುತ್ತಾನೆಂದು ಹೇಳ ಬೇಡಿರಿ.
14ನನಗೆ ವಿರೋಧವಾಗಿ ಅವನು ನುಡಿ ಗಳನ್ನು ಸಿದ್ಧಮಾಡಲಿಲ್ಲ; ನಿಮ್ಮ ಮಾತುಗಳಿಂದ ನಾನು ಅವನಿಗೆ ಉತ್ತರ ಕೊಡುವದಿಲ್ಲ.