2ಇಗೋ, ಈಗ ನನ್ನ ಬಾಯನ್ನು ತೆರೆದಿದ್ದೇನೆ. ನನ್ನ ನಾಲಿಗೆ ನನ್ನ ಬಾಯಲ್ಲಿ ಮಾತನಾಡುತ್ತದೆ.
3ನನ್ನ ಮಾತುಗಳು ನನ್ನ ಹೃದಯದ ಯಥಾರ್ಥತೆಯಿಂದ ಇರುವವು ಮತ್ತು ನನ್ನ ತುಟಿಗಳು ವಿವೇಕವನ್ನು ಸ್ಪಷ್ಟವಾಗಿ ಉಚ್ಚರಿಸುತ್ತವೆ.
4ದೇವರ ಆತ್ಮನು ನನ್ನನ್ನು ಉಂಟುಮಾಡಿದನು; ಸರ್ವಶಕ್ತನ ಶ್ವಾಸವು ನನಗೆ ಜೀವವನ್ನು ಕೊಟ್ಟಿತು.
5ನೀನು ನನಗೆ ಉತ್ತರ ಕೊಡುವದಕ್ಕೆ ಸಾಧ್ಯವಾದರೆ ನಿನ್ನ ಮಾತುಗಳನ್ನು ಸಿದ್ಧಮಾಡಿಕೊಂಡು ನನ್ನ ಮುಂದೆ ನಿಂತುಕೋ.
6ಇಗೋ, ನಾನು ದೇವರ ಮುಂದೆ ನಿನ್ನ ಹಾಗೆಯೇ ಇದ್ದೇನೆ; ಮಣ್ಣಿನಿಂದ ನಾನು ಸಹ ರೂಪಿಸಲ್ಪಟ್ಟಿದ್ದೇನೆ.