ಯೋಬು 9

ಆತನು ಹೃದಯದಲ್ಲಿ ಜ್ಞಾನಿಯೂ ಬಲದಲ್ಲಿ ಶಕ್ತನೂ ಆಗಿದ್ದಾನೆ; ಆತನಿಗೆ ವಿರೋಧವಾಗಿ ತನ್ನನ್ನು ಕಠಿಣಪಡಿಸಿಕೊಂಡು ವೃದ್ಧಿಯಾಗುವವನು ಯಾರು?

Job 9:4 (UKJV) He is wise in heart, and mighty in strength: who has hardened himself against him, and has prospered?

2ಸತ್ಯವು ಹೀಗೆ ಇರುವದೆಂದು ಬಲ್ಲೆನು. ಆದರೆ ಮನುಷ್ಯನು ದೇವರ ಮುಂದೆ ನೀತಿವಂತ ನಾಗುವದು ಹೇಗೆ?

3ಆತನ ಸಂಗಡ ವ್ಯಾಜ್ಯವಾಡಲು ಅವನು ಇಚ್ಛಿಸುವದಾದರೆ, ಆತನಿಗೆ ಸಾವಿರದಲ್ಲಿ ಒಂದಕ್ಕೂ ಅವನು ಉತ್ತರಕೊಡಲಾರನು.

4ಆತನು ಹೃದಯದಲ್ಲಿ ಜ್ಞಾನಿಯೂ ಬಲದಲ್ಲಿ ಶಕ್ತನೂ ಆಗಿದ್ದಾನೆ; ಆತನಿಗೆ ವಿರೋಧವಾಗಿ ತನ್ನನ್ನು ಕಠಿಣಪಡಿಸಿಕೊಂಡು ವೃದ್ಧಿಯಾಗುವವನು ಯಾರು?

5ಪರ್ವತಗಳನ್ನು ಅವು ಗಳಿಗೆ ತಿಳಿಯದ ಹಾಗೆ ನೂಕುತ್ತಾನೆ; ತನ್ನ ಸಿಟ್ಟಿನಲ್ಲಿ ಅವುಗಳನ್ನು ತಿರುಗಿಸುತ್ತಾನೆ.

6ಭೂಮಿಯನ್ನು ಅದರ ಸ್ಥಳದೊಳಗಿಂದ ಕದಲಿಸುತ್ತಾನೆ; ಅದರ ಸ್ತಂಭಗಳು ನಡುಗುತ್ತವೆ.

Kannada Bible (Old Version), Bible Society of India.