14ಆಗ ಕಾಲೇಬನು ಅಲ್ಲಿಂದ ಅನಾಕನ ಮೂವರು ಮಕ್ಕಳಾದ ಶೇಷೈ ಅಹೀಮನ್ ತಲ್ಮೈಯ ರನ್ನು ಹೊರಡಿಸಿಬಿಟ್ಟನು.
15ಕಾಲೇಬನು ಅಲ್ಲಿಂದ ಹೊರಟು--ಯಾವನು ಪೂರ್ವದಲ್ಲಿ ಕಿರ್ಯತ್ ಸೇಫರ್ ಎಂಬ ಹೆಸರು ಉಂಟಾಗಿದ್ದ ದೆಬೀರಿನ ವಾಸಿಗಳ ಬಳಿಗೆ ಹೋಗಿ
16ಅವನು ಕಿರ್ಯತ್ ಸೇಫೆರನ್ನು ಹೊಡೆದು ಹಿಡಿಯುವನೋ ಅವನಿಗೆ ನನ್ನ ಮಗಳಾದ ಅಕ್ಷಾಳನ್ನು ಮದುವೆಮಾಡಿ ಕೊಡು ವೆನು ಎಂದು ಹೇಳಿದ್ದನು.
17ಆಗ ಕೆನಜನ ಮಗನೂ ಕಾಲೇಬನ ಸಹೋದರನೂ ಆದ ಒತ್ನೀಯೇಲನು ಅದನ್ನು ಹಿಡಿದನು. ಅವನು ತನ್ನ ಮಗಳಾದ ಅಕ್ಷಾಳನ್ನು ಅವನಿಗೆ ಮದುವೆಮಾಡಿ ಕೊಟ್ಟನು.
18ಅವಳು ಬಂದಾಗ ತನ್ನ ತಂದೆಯಿಂದ ಒಂದು ಹೊಲವನ್ನು ಕೇಳುವದಕ್ಕೆ ಅವನನ್ನು ಪ್ರೇರೇಪಿಸಿ ತಾನು ಕತ್ತೆಯ ಮೇಲಿನಿಂದ ಇಳಿದಳು. ಆಗ ಕಾಲೇಬನು ಅವಳನ್ನು ನೋಡಿ--ನಿನಗೆ ಏನು ಬೇಕು ಅಂದನು.