ಯೆಹೋಶುವ 16

ತಪ್ಪೂಹದಿಂದ ಪಶ್ಚಿಮದ ಮೇರೆಯೂ ಕಾನಾ ನದಿಗೆ ಹೋಗಿ ಸಮುದ್ರದಲ್ಲಿ ಮುಗಿಯುವದು. ಇದು ಎಫ್ರಾಯಾ ಮನ ಮಕ್ಕಳ ಗೋತ್ರ, ಅವರ ಕುಂಟುಂಬಗಳ ಪ್ರಕಾರವೇ ಉಂಟಾದ ಬಾಧ್ಯತೆ.

Joshua 16:8 (UKJV) The border went out from Tappuah westward unto the river Kanah; and the activities out thereof were at the sea. This is the inheritance of the tribe of the children of Ephraim by their families.

6ಪಶ್ಚಿಮದ ಮೇರೆ ಮಿಕ್ಮೆತಾತಿನಿಂದ ಉತ್ತರಕ್ಕೆ ಹೊರಟು ಮೂಡಣಕ್ಕೆ ತಾನತ್‌ ಶೀಲೋವಿಗೆ ತಿರುಗಿ ಯಾನೋಹಕ್ಕೆ ಮೂಡಣ ಕಡೆಯಾಗಿ ಹಾದು ಹೋಗಿ

7ಯಾನೋಹದಿಂದ ಅಟಾರೋತಿಗೂ ನಾರಾಕ್ಕೂ ಇಳಿದು ಯೆರಿಕೋವಿನ ಬಳಿಯಲ್ಲಿ ಬಂದು ಯೊರ್ದನಿಗೆ ಮುಗಿಯುವದು.

8ತಪ್ಪೂಹದಿಂದ ಪಶ್ಚಿಮದ ಮೇರೆಯೂ ಕಾನಾ ನದಿಗೆ ಹೋಗಿ ಸಮುದ್ರದಲ್ಲಿ ಮುಗಿಯುವದು. ಇದು ಎಫ್ರಾಯಾ ಮನ ಮಕ್ಕಳ ಗೋತ್ರ, ಅವರ ಕುಂಟುಂಬಗಳ ಪ್ರಕಾರವೇ ಉಂಟಾದ ಬಾಧ್ಯತೆ.

9ಎಫ್ರಾಯಾಮನ ಮಕ್ಕಳಿಗೆ ಕೊಡಲ್ಪಟ್ಟ ಎಲ್ಲಾ ಪಟ್ಟಣಗಳೂ ಅವುಗಳ ಗ್ರಾಮಗಳೂ ಮನಸ್ಸೆಯ ಮಕ್ಕಳ ಬಾಧ್ಯತೆಯ ಮಧ್ಯೆ ಪ್ರತ್ಯೇಕವಾಗಿ ಕೊಡಲ್ಪಟ್ಟವು.

10ಗೆಜೆರಿನಲ್ಲಿ ವಾಸ ವಾಗಿದ್ದ ಕಾನಾನ್ಯರನ್ನು ಅವರು ಹೊರಡಿಸಿ ಬಿಡದೆ ಹೋದದ್ದರಿಂದ ಕಾನಾನ್ಯರು ಈ ವರೆಗೂ ಅವರಲ್ಲಿ ವಾಸವಾಗಿದ್ದು ಕಪ್ಪಕೊಡುವ ಸೇವಕರಾಗಿದ್ದಾರೆ.

Kannada Bible (Old Version), Bible Society of India.