ಯೆಹೋಶುವ 7

ಆಗ ಯೆಹೋಶುವನು ಅವರಿಗೆ--ನೀವು ದೇಶ ವನ್ನು ಪಾಳತಿ ನೋಡಿ ಬನ್ನಿರಿ ಎಂದು ಹೇಳಿ ಯೆರಿಕೋ ವಿನಿಂದ ಮನುಷ್ಯರನ್ನು ಬೇತೇಲಿಗೆ ಪೂರ್ವಕಡೆಯಾದ ಬೇತಾವೆನಿನ ಬಳಿಯಲ್ಲಿರುವ ಆಯಿಗೆ ಕಳುಹಿಸಿದನು. ಆಗ ಅವರು ಹೋಗಿ ಆಯಿಯನ್ನು ಪಾಳತಿನೋಡಿ

Joshua 7:2 (UKJV) And Joshua sent men from Jericho to Ai, which is beside Bethaven, on the east of Bethel, and spoke unto them, saying, Go up and view the country. And the men went up and viewed Ai.

11 ಯೆಹೂದ ಗೋತ್ರದ ಜೆರಹನ ಮಗನಾದ ಜಬ್ದೀಯ ಮಗನಾದ ಕರ್ವಿಾಯ ಮಗನಾದ ಆಕಾನನು ಶಾಪಕ್ಕೀಡಾದದ್ದರಲ್ಲಿ ಕೆಲವನ್ನು ತೆಗೆದುಕೊಂಡನು. ಈ ಕಾರಣದಿಂದ ಇಸ್ರಾಯೇಲ್‌ ಮಕ್ಕಳು ಶಾಪಕ್ಕೀಡಾದವರಲ್ಲಿ ಅಪರಾಧಿಗಳಾದರು. ಆದದರಿಂದ ಕರ್ತನ ಕೋಪವು ಇಸ್ರಾಯೇಲ್‌ ಮಕ್ಕಳ ಮೇಲೆ ಉರಿಯಹತ್ತಿತ್ತು.

2ಆಗ ಯೆಹೋಶುವನು ಅವರಿಗೆ--ನೀವು ದೇಶ ವನ್ನು ಪಾಳತಿ ನೋಡಿ ಬನ್ನಿರಿ ಎಂದು ಹೇಳಿ ಯೆರಿಕೋ ವಿನಿಂದ ಮನುಷ್ಯರನ್ನು ಬೇತೇಲಿಗೆ ಪೂರ್ವಕಡೆಯಾದ ಬೇತಾವೆನಿನ ಬಳಿಯಲ್ಲಿರುವ ಆಯಿಗೆ ಕಳುಹಿಸಿದನು. ಆಗ ಅವರು ಹೋಗಿ ಆಯಿಯನ್ನು ಪಾಳತಿನೋಡಿ

3ಯೆಹೋಶುವನ ಬಳಿಗೆ ತಿರಿಗಿ ಬಂದು ಅವನಿಗೆ--ಜನರೆಲ್ಲರೂ ಏರಿಹೋಗದೆ ಇರಲಿ; ಆಯಿಯನ್ನು ಹೊಡೆಯುವದಕ್ಕೆ ಎರಡು ಅಥವಾ ಮೂರು ಸಾವಿರ ಜನರು ಮಾತ್ರವೇ ಹೋಗಲಿ; ಅಲ್ಲಿಗೆ ಹೋಗುವ ಜನರೆಲ್ಲರನ್ನೂ ದಣಿಸಬೇಡ; ಯಾಕಂದರೆ ಸ್ವಲ್ಪ ಜನರು ಮಾತ್ರ ಇದ್ದಾರೆ ಅಂದರು.

4ಹಾಗೆಯೇ ಜನರಲ್ಲಿ ಹೆಚ್ಚು ಕಡಿಮೆ ಮೂರುಸಾವಿರ ಮಂದಿ ಅಲ್ಲಿಗೆ ಹೋದರು; ಆದರೆ ಅವರು ಆಯಿಯ ಮನುಷ್ಯರ ಮುಂದೆ ಓಡಿಹೋದರು.

Kannada Bible (Old Version), Bible Society of India.