57ಅದು ಬಟ್ಟೆಯಲ್ಲಾಗಲಿ ಹಾಸಿ ನಲ್ಲಾಗಲಿ ಹೊಕ್ಕಿನಲ್ಲಾಗಲಿ ಇಲ್ಲವೆ ಚರ್ಮದ ಯಾವದರಲ್ಲಿಯಾಗಲಿ ಇನ್ನೂ ಕಂಡುಬಂದರೆ ಅದು ಹರಡುವ ವ್ಯಾಧಿ ಮತ್ತು ವ್ಯಾಧಿಯುಳ್ಳದ್ದನ್ನು ನೀನು ಬೆಂಕಿಯಿಂದ ಸುಡಬೇಕು.
58ನೀನು ತೊಳೆದ ಮೇಲೆ ಆ ವ್ಯಾಧಿಯು ಯಾವದರಿಂದ ಹೊರಟು ಹೋಯಿತೋ ಆ ಬಟ್ಟೆಯನ್ನೂ ಹಾಸನ್ನೂ ಹೊಕ್ಕನ್ನೂ ಇಲ್ಲವೆ ಚರ್ಮದ ಯಾವದೇ ವಸ್ತುವನ್ನೂ ಎರಡನೆಯ ಸಾರಿ ತೊಳೆಯಬೇಕು, ಆಗ ಅದು ಶುದ್ಧವಾಗಿರುವದು.
59ಉಣ್ಣೆಯಲ್ಲಾಗಲಿ ನಾರಿನ ಬಟ್ಟೆಯಲ್ಲಾಗಲಿ ಹಾಸಿನ ಹೊಕ್ಕಿನ ಮತ್ತು ಚರ್ಮದಿಂದಾದ ಯಾವದ ರಿಂದಾಗಲಿ ಕುಷ್ಠವ್ಯಾಧಿಯವಿಷಯದಲ್ಲಿ ಅದನ್ನು ಶುದ್ಧವೆಂದು ಅಶುದ್ಧವೆಂದು ನುಡಿಯುವದಕ್ಕೆ ನ್ಯಾಯ ವಿಧಿಯು ಇದೇ.