16ಕರ್ತನ ನಾಮವನ್ನು ದೂಷಣೆ ಮಾಡುವವನಿಗೆ ನಿಶ್ಚಯವಾಗಿ ಮರಣವನ್ನು ವಿಧಿಸಬೇಕು ಮತ್ತು ಸಭೆಯವರೆಲ್ಲರು ನಿಶ್ಚಯವಾಗಿ ಅವನಿಗೆ ಕಲ್ಲೆಸೆಯಬೇಕು. ಇದಲ್ಲದೆ ದೇಶದೊಳಗೆ ಹುಟ್ಟಿದ ಪರಕೀಯನು ಕರ್ತನ ಹೆಸರನ್ನು ದೂಷಣೆ ಮಾಡಿದಾಗ ಅವನನ್ನು ಮರಣಕ್ಕೆ ಒಳಪಡಿಸಬೇಕು.
17ಯಾವನಾದರೂ ಮನುಷ್ಯನನ್ನು ಕೊಲ್ಲುವವನು ನಿಶ್ಚಯವಾಗಿ ಮರಣಕ್ಕೆ ಒಳಪಡಬೇಕು.
18ಪಶುವನ್ನು ಕೊಲ್ಲುವವನು ಅದಕ್ಕೆ ಪ್ರತಿಯಾಗಿ ಪಶುವನ್ನು ಕೊಡಬೇಕು.
19ಯಾವನಾದರೂ ತನ್ನ ನೆರೆಯವನಿಗೆ ಊನ ವಾಗುವಂತೆ ಮಾಡಿದರೆ ಅವನು ಮಾಡಿದಂತೆಯೇ ಅವನಿಗೆ ಮಾಡಬೇಕು;
20ಮುರಿತಕ್ಕೆ ಮುರಿತ, ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಅವನು ಒಬ್ಬನಿಗೆ ಊನಮಾಡಿದ ಹಾಗೆಯೇ ಅವನಿಗೂ ಮಾಡಬೇಕು.