3ಅವನು ಅದರ ಎಲ್ಲಾ ಕೊಬ್ಬನ್ನೂ ಹಿಂಭಾಗ ವನ್ನೂ ಕರುಳುಗಳ ಮೇಲಿರುವ ಕೊಬ್ಬನ್ನೂ
4ಬದಿಯ ಲ್ಲಿರುವ ಎರಡು ಮೂತ್ರಜನಕಾಂಗಗಳನ್ನೂ ಅವು ಗಳ ಮೇಲಿರುವ ಕೊಬ್ಬನ್ನೂ ಕಲಿಜದ ಮೇಲಿರುವ ಪೊರೆ ಯನ್ನೂ ಮೂತ್ರಜನಕಾಂಗಗಳೊಂದಿಗೆ ತೆಗೆದು ಕೊಂಡು ಅರ್ಪಿಸಬೇಕು.
5ಆಗ ಯಾಜಕನು ಅವು ಗಳನ್ನು ಬೆಂಕಿಯಿಂದ ಕರ್ತನಿಗೆ ಸಮರ್ಪಿಸುವ ಯಜ್ಞ ವೇದಿಯ ಮೇಲೆ ಸುಡಬೇಕು. ಇದು ಅತಿಕ್ರಮದ ಬಲಿಯಾಗಿದೆ.
6ಯಾಜಕರಲ್ಲಿ ಗಂಡಸರೆಲ್ಲರೂ ಅದನ್ನು ಪರಿಶುದ್ಧವಾದ ಸ್ಥಳದಲ್ಲಿ ತಿನ್ನಬೇಕು. ಅದು ಅತಿ ಪರಿಶುದ್ಧವಾದದ್ದು.
7ಪಾಪದ ಬಲಿಯ ಹಾಗೆಯೇ ಅತಿಕ್ರಮದ ಬಲಿಯೂ ಆಗಿದೆ. ಅವುಗಳಿಗೆ ಇರುವದು ಒಂದೇ ನಿಯಮ; ಅವುಗಳಿಂದ ಪ್ರಾಯಶ್ಚಿತ್ತಮಾಡುವ ಯಾಜಕನೇ ಅವುಗಳನ್ನು ತೆಗೆದುಕೊಳ್ಳಬೇಕು.