ನೆಹೆಮೀಯ 2

ಆಗ ನಾನು ಬಹು ಭಯಪಟ್ಟು ಅರಸನಿಗೆ--ಅರಸನು ಎಂದೆಂದಿಗೂ ಬಾಳಲಿ. ನನ್ನ ತಂದೆಗಳ ಸಮಾಧಿ ಗಳಿರುವ ಸ್ಥಳವಾದ ಆ ಪಟ್ಟಣವು ಹಾಳಾಗಿದ್ದು ಅದರ ಬಾಗಲುಗಳು ಬೆಂಕಿಯಿಂದ ಸುಡಲ್ಪಟ್ಟಿರುವಾಗ ನನ್ನ ಮುಖವು ದುಃಖವಿಲ್ಲದೆ ಇರುವದು ಹೇಗೆ ಅಂದೆನು.

Nehemiah 2:3 (UKJV) And said unto the king, Let the king live for ever: why should not my countenance be sad, when the city, the place of my fathers' sepulchers, lies waste, and the gates thereof are consumed with fire?

1ಅರಸನಾದ ಅರ್ತಷಸ್ತನ ಇಪ್ಪತ್ತನೇವರುಷದ ನೀಸಾನ್‌ ತಿಂಗಳಲ್ಲಿ ಏನಾಯಿ ತಂದರೆ, ಅವನ ಮುಂದೆ ದ್ರಾಕ್ಷಾರಸವಿರುವಾಗ ನಾನು ಆ ದ್ರಾಕ್ಷಾರಸವನ್ನು ತಕ್ಕೊಂಡು ಅರಸನಿಗೆ ಕೊಟ್ಟೆನು. ಆದರೆ ಇದಕ್ಕೆ ಮುಂಚೆ ನಾನು ಅವನ ಸಮ್ಮುಖ ದಲ್ಲಿ ದುಃಖಿತನಾಗಿದ್ದದ್ದಿಲ್ಲ.

2ಆದಕಾರಣ ಅರಸನು ನನಗೆ--ನಿನಗೆ ಕಾಯಿಲೆ ಇಲ್ಲದೆ ನಿನ್ನ ಮುಖವು ದುಃಖವಾಗಿರುವದೇನು? ನಿನಗೆ ರೋಗವಿಲ್ಲವಲ್ಲಾ? ಇದು ಮನೋ ದುಃಖವಲ್ಲದೆ ಮತ್ತೊಂದಲ್ಲ ಅಂದನು.

3ಆಗ ನಾನು ಬಹು ಭಯಪಟ್ಟು ಅರಸನಿಗೆ--ಅರಸನು ಎಂದೆಂದಿಗೂ ಬಾಳಲಿ. ನನ್ನ ತಂದೆಗಳ ಸಮಾಧಿ ಗಳಿರುವ ಸ್ಥಳವಾದ ಆ ಪಟ್ಟಣವು ಹಾಳಾಗಿದ್ದು ಅದರ ಬಾಗಲುಗಳು ಬೆಂಕಿಯಿಂದ ಸುಡಲ್ಪಟ್ಟಿರುವಾಗ ನನ್ನ ಮುಖವು ದುಃಖವಿಲ್ಲದೆ ಇರುವದು ಹೇಗೆ ಅಂದೆನು.

4ಅದಕ್ಕೆ ಅರಸನು ನನಗೆ--ನೀನು ಕೇಳುವದೇನು ಅಂದನು.

5ಆಗ ನಾನು ಪರಲೋಕದ ದೇವರಿಗೆ ಪ್ರಾರ್ಥನೆಮಾಡಿ ಅರಸನಿಗೆ--ಅರಸನು ಮೆಚ್ಚಿದರೆ ಮತ್ತು ನಿನ್ನ ಸೇವಕನಿಗೆ ನಿನ್ನ ಮುಂದೆ ದಯೆ ದೊರಕಿದರೆ ನೀನು ನನ್ನನ್ನು ನನ್ನ ತಂದೆಗಳ ಸಮಾಧಿಗಳಿರುವ ಪಟ್ಟಣವನ್ನು ಕಟ್ಟಿಸುವದಕ್ಕಾಗಿ ಯೆಹೂದಕ್ಕೆ ನನ್ನನ್ನು ಕಳುಹಿಸಬೇಕು ಅಂದೆನು.

Kannada Bible (Old Version), Bible Society of India.