ನೆಹೆಮೀಯ 4

ಅವರ ಬಳಿಯಲ್ಲಿ ವಾಸವಾಗಿರುವ ಯೆಹೂದ್ಯರು ನಮ್ಮ ಬಳಿಗೆ ಬಂದಾಗನೀವು ತಿರುಗುವ ಎಲ್ಲಾ ಸ್ಥಳಗಳಿಂದ ನಮ್ಮ ಮೇಲೆ ಬಂದಾರು ಎಂದು ನಮಗೆ ಹತ್ತುಸಾರಿ ಹೇಳಿದರು.

Nehemiah 4:12 (UKJV) And it came to pass, that when the Jews which dwelt by them came, they said unto us ten times, From all places whence all of you shall return unto us they will be upon you.

10ಆಗ ಯೆಹೂದದವರು--ಹೊರೆ ಹೊರುವವರ ಬಲವು ಕಡಿಮೆಯಾಗಿ ಮಣ್ಣು ಬಹಳವಾಗಿದೆ; ಗೋಡೆಯನ್ನು ನಾವು ಕಟ್ಟಲಾರೆವು ಅಂದರು.

11ನಮ್ಮ ವೈರಿಗಳು--ಅವರು ತಿಳಿಯದ ಹಾಗೆಯೂ ನೋಡದ ಹಾಗೆಯೂ ನಾವು ಅವರ ನಡುವೆ ಬಂದು ಅವರನ್ನು ಕೊಂದುಹಾಕಿ ಕೆಲಸವನ್ನು ನಿಲ್ಲಿಸಿ ಬಿಡುವೆವು ಅಂದರು.

12ಅವರ ಬಳಿಯಲ್ಲಿ ವಾಸವಾಗಿರುವ ಯೆಹೂದ್ಯರು ನಮ್ಮ ಬಳಿಗೆ ಬಂದಾಗನೀವು ತಿರುಗುವ ಎಲ್ಲಾ ಸ್ಥಳಗಳಿಂದ ನಮ್ಮ ಮೇಲೆ ಬಂದಾರು ಎಂದು ನಮಗೆ ಹತ್ತುಸಾರಿ ಹೇಳಿದರು.

13ಆದಕಾರಣ ನಾನು ಗೋಡೆಗೆ ಹಿಂದಾಗಿರುವ ತಗ್ಗಿನ ಸ್ಥಳಗಳಲ್ಲಿಯೂ ಎತ್ತರವಾದ ಸ್ಥಳಗಳಲ್ಲಿಯೂ ಜನರನ್ನು ನಿಲ್ಲಿಸಿದೆನು; ತಮ್ಮ ಕತ್ತಿಗಳನ್ನೂ ಈಟಿಗ ಳನ್ನೂ ಬಿಲ್ಲುಗಳನ್ನೂ ಹಿಡುಕೊಂಡಿರುವ ಜನವನ್ನು ಅವರವರ ವಂಶಗಳ ಪ್ರಕಾರ ನಿಲ್ಲಿಸಿದೆನು.

14ನಾನು ನೋಡಿದ ತರುವಾಯ ಎದ್ದು ಶ್ರೇಷ್ಠರಿಗೂ ಅಧಿಕಾರ ಸ್ಥರಿಗೂ ಇತರ ಜನರಿಗೂ--ನೀವು ಅವರಿಗೋಸ್ಕರ ಭಯಪಡಬೇಡಿರಿ; ದೊಡ್ಡವನಾಗಿಯೂ ಭಯಂಕರ ನಾಗಿಯೂ ಇರುವ ಕರ್ತನನ್ನು ಜ್ಞಾಪಕಮಾಡಿ ಕೊಂಡು ನಿಮ್ಮ ಸಹೋದರರಿಗೋಸ್ಕರ, ಕುಮಾರ, ಕುಮಾರ್ತೆಯರಿಗೋಸ್ಕರ, ಹೆಂಡತಿಯರಿಗೋಸ್ಕರ, ನಿಮ್ಮ ಮನೆಗಳಿಗೋಸ್ಕರ ಯುದ್ಧಮಾಡಿರಿ ಅಂದೆನು.

Kannada Bible (Old Version), Bible Society of India.