ಫಿಲಿಪ್ಪಿ 2

ಕಲಹದಿಂದಾಗಲಿ ಒಣ ಹೆಮ್ಮೆಯಿಂದಾಗಲಿ ಯಾವ ದನ್ನೂ ಮಾಡದೆ ಪ್ರತಿಯೊಬ್ಬನು ದೀನ ಮನಸ್ಸಿನಿಂದ ಬೇರೆಯವರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ.

Philippians 2:3 (UKJV) Let nothing be done through strife or vainglory; but in lowliness of mind let each esteem other better than themselves.

1ಕ್ರಿಸ್ತನಲ್ಲಿ ಆದರಣೆ, ಪ್ರೀತಿಯ ಸಂತೈಸುವಿಕೆ, ಆತ್ಮನ ಅನ್ಯೋನ್ಯತೆ, ದಯಾ ವಾತ್ಸಲ್ಯಗಳು ಇರುವದಾದರೆ

2ಐಕ್ಯಮತ್ಯವುಳ್ಳವ ರಾಗಿದ್ದು ನನ್ನ ಸಂತೋಷವನ್ನು ಪರಿಪೂರ್ಣ ಮಾಡಿರಿ. ನಿಮ್ಮೆಲ್ಲರಲ್ಲಿ ಒಂದೇ ಪ್ರೀತಿಯಿರಲಿ; ಅನ್ಯೋ ನ್ಯತೆಯುಳ್ಳವರೂ ಒಂದೇ ಮನಸ್ಸಿನವರೂ ಆಗಿರ್ರಿ.

3ಕಲಹದಿಂದಾಗಲಿ ಒಣ ಹೆಮ್ಮೆಯಿಂದಾಗಲಿ ಯಾವ ದನ್ನೂ ಮಾಡದೆ ಪ್ರತಿಯೊಬ್ಬನು ದೀನ ಮನಸ್ಸಿನಿಂದ ಬೇರೆಯವರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ.

4ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ.

5ಕ್ರಿಸ್ತ ಯೇಸುವಿನಲ್ಲಿದ್ದ ಮನಸ್ಸೇ ನಿಮ್ಮಲ್ಲಿ ಇರಲಿ.

Kannada Bible (Old Version), Bible Society of India.