15ಅವು ಯಾವಾಗಲೂ ಕರ್ತನ ಮುಂದೆ ಇರಲಿ; ಆತನು ಅವನ ಜ್ಞಾಪಕವನ್ನು ಭೂಮಿಯೊಳಗಿಂದ ಕಡಿದುಬಿಡಲಿ.
16ಅವನು ಕರುಣೆ ತೋರಿಸುವದನ್ನು ಮರೆತು ಹೃದಯದಲ್ಲಿ ನೊಂದವ ರನ್ನು ಕೊಲ್ಲುವದಕ್ಕೂ ಬಡವನನ್ನೂ ಕೊರತೆಯುಳ್ಳ ವವನ್ನೂ ಹಿಂಸಿಸಿದನು.
17ಅವನು ಶಾಪವನ್ನು ಪ್ರೀತಿ ಮಾಡಿದನು; ಅದು ಅವನಿಗೆ ಬರಲಿ. ಆಶೀರ್ವಾದಕ್ಕೆ ಮೆಚ್ಚಲಿಲ್ಲ; ಅದು ಅವನಿಗೆ ದೂರವಾಗಿರಲಿ.
18ಅವನು ತನ್ನ ವಸ್ತ್ರದಂತೆ ಶಾಪವನ್ನು ಹೊದ್ದುಕೊಂಡನು; ಅದು ನೀರಿನಂತೆ ಅವನ ಅಂತರಂಗದಲ್ಲಿಯೂ ಎಣ್ಣೆಯಂತೆ ಅವನ ಎಲುಬುಗಳಲ್ಲಿಯೂ ಸೇರಲಿ.
19ಅದು ಅವ ನಿಗೆ ತೊಟ್ಟುಕೊಂಡ ಅಂಗಿಯ ಹಾಗೆಯೂ ಯಾವಾ ಗಲೂ ನಡುವಿಗೆ ಕಟ್ಟುವ ನಡುಕಟ್ಟಿನ ಹಾಗೆಯೂ ಇರಲಿ.