ಸ್ತುತಿಗಳು 125

ನೀತಿವಂತರು ತಮ್ಮ ಕೈಗಳನ್ನು ಅನ್ಯಾಯಕ್ಕೆ ಚಾಚದ ಹಾಗೆ, ದುಷ್ಟನ ಕೋಲು ನೀತಿವಂತರ ಸ್ವಾಸ್ತ್ಯದ ಮೇಲೆ ನೆಲೆಯಾಗಿರುವದಿಲ್ಲ.

Psalm 125:3 (UKJV) For the rod of the wicked shall not rest upon the lot of the righteous; lest the righteous put forth their hands unto iniquity.

1ಕರ್ತನಲ್ಲಿ ಭರವಸವಿಡುವವರು ಚೀಯೋನ್‌ ಪರ್ವತದ ಹಾಗಿ ದ್ದಾರೆ; ಅದು ಕದಲದೆ ಯುಗಯುಗಕ್ಕೂ ಇರುವದು.

2ಯೆರೂಸಲೇಮಿನ ಸುತ್ತಲೂ ಬೆಟ್ಟಗಳಿರುವಂತೆ ಕರ್ತನು ಈಗಿನಿಂದ ಯುಗಯುಗಕ್ಕೂ ತನ್ನ ಜನರ ಸುತ್ತಲೂ ಇದ್ದಾನೆ.

3ನೀತಿವಂತರು ತಮ್ಮ ಕೈಗಳನ್ನು ಅನ್ಯಾಯಕ್ಕೆ ಚಾಚದ ಹಾಗೆ, ದುಷ್ಟನ ಕೋಲು ನೀತಿವಂತರ ಸ್ವಾಸ್ತ್ಯದ ಮೇಲೆ ನೆಲೆಯಾಗಿರುವದಿಲ್ಲ.

4ಓ ಕರ್ತನೇ, ಒಳ್ಳೆಯವರಿಗೂ ಯಥಾರ್ಥ ಹೃದಯವುಳ್ಳವರಿಗೂ ಒಳ್ಳೇದನ್ನು ಮಾಡು.

5ಆದರೆ ತಮ್ಮ ಡೊಂಕು ಮಾರ್ಗಗಳಲ್ಲಿ ತಿರುಗುವವರನ್ನು ದುಷ್ಟತನ ಮಾಡುವವರ ಸಂಗಡ ಕರ್ತನು ಹೋಗ ಮಾಡುವನು. ಇಸ್ರಾಯೇಲಿನ ಮೇಲೆ ಸಮಾಧಾನ ವಿರುವದು.

Kannada Bible (Old Version), Bible Society of India.