ಸ್ತುತಿಗಳು 13

ಎಷ್ಟರ ವರೆಗೆ ನನ್ನ ಪ್ರಾಣದಲ್ಲಿ ಆಲೋಚನೆಗಳನ್ನೂ ಪ್ರತಿದಿನ ನನ್ನ ಹೃದಯದಲ್ಲಿ ದುಃಖವನ್ನೂ ಇಟ್ಟುಕೊಳ್ಳಬೇಕು? ಎಷ್ಟರ ವರೆಗೆ ನನ್ನ ಶತ್ರುವು ನನ್ನ ಮೇಲೆ ಹೆಚ್ಚಿಸಿಕೊಳ್ಳುವನು?

Psalm 13:2 (UKJV) How long shall I take counsel in my soul, having sorrow in my heart daily? how long shall mine enemy be exalted over me?

1ಓ ಕರ್ತನೇ, ಎಷ್ಟರ ವರೆಗೆ ನನ್ನನ್ನು ಮರೆಯುವಿ? ಎಂದೆಂದಿಗೂ ಮರೆಯು ವಿಯೋ? ಎಷ್ಟರ ವರೆಗೆ ನಿನ್ನ ಮುಖವನ್ನು ನನ್ನಿಂದ ಮರೆಮಾಡುವಿ?

2ಎಷ್ಟರ ವರೆಗೆ ನನ್ನ ಪ್ರಾಣದಲ್ಲಿ ಆಲೋಚನೆಗಳನ್ನೂ ಪ್ರತಿದಿನ ನನ್ನ ಹೃದಯದಲ್ಲಿ ದುಃಖವನ್ನೂ ಇಟ್ಟುಕೊಳ್ಳಬೇಕು? ಎಷ್ಟರ ವರೆಗೆ ನನ್ನ ಶತ್ರುವು ನನ್ನ ಮೇಲೆ ಹೆಚ್ಚಿಸಿಕೊಳ್ಳುವನು?

3ನನ್ನ ದೇವರಾದ ಓ ಕರ್ತನೇ, ದೃಷ್ಟಿಸಿ ನನಗೆ ಉತ್ತರಕೊಡು; ನಾನು ಮರಣದ ನಿದ್ದೆಮಾಡದ ಹಾಗೆಯೂ

4ನನ್ನ ಶತ್ರುವು--ಅವನನ್ನು ಗೆದ್ದೆನೆಂದು ಹೇಳದ ಹಾಗೆಯೂ ನಾನು ಕದಲುವಾಗ ನನ್ನನ್ನು ಹಿಂಸಿಸುವವರು ಉಲ್ಲಾಸಪಡದ ಹಾಗೆಯೂ ನನ್ನ ಕಣ್ಣುಗಳನ್ನು ಬೆಳಗುವ ಹಾಗೆ ಮಾಡು.

Kannada Bible (Old Version), Bible Society of India.