ಸ್ತುತಿಗಳು 139

ಉದಯದ ರೆಕ್ಕೆಗಳನ್ನು ಕಟ್ಟಿಕೊಂಡು ಸಮುದ್ರದ ಕಟ್ಟಕಡೆಯಲ್ಲಿ ವಾಸಮಾಡಿದರೆ

Psalm 139:9 (UKJV) If I take the wings of the morning, and dwell in the uttermost parts of the sea;

7ನಾನು ನಿನ್ನ ಆತ್ಮಕ್ಕೆ ತಪ್ಪಿಸಿಕೊಂಡು ಎಲ್ಲಿಗೆ ಹೋಗಲಿ? ನಿನ್ನ ಸನ್ನಿಧಿಯಿಂದ ತಪ್ಪಿಸಿಕೊಂಡು ಎಲ್ಲಿಗೆ ಓಡಲಿ?

8ನಾನು ಆಕಾಶಕ್ಕೆ ಏರಿಹೋದರೆ ನೀನು ಅಲ್ಲಿ ಇದ್ದೀ; ಪಾತಾಳದಲ್ಲಿ ನನ್ನ ಹಾಸಿಗೆಯನ್ನು ಮಾಡಿಕೊಂಡರೆ ಅಗೋ, ನೀನು ಅಲ್ಲಿ ಇದ್ದೀ.

9ಉದಯದ ರೆಕ್ಕೆಗಳನ್ನು ಕಟ್ಟಿಕೊಂಡು ಸಮುದ್ರದ ಕಟ್ಟಕಡೆಯಲ್ಲಿ ವಾಸಮಾಡಿದರೆ

10ಅಲ್ಲಿಯೂ ನಿನ್ನ ಕೈ ನನ್ನನ್ನು ನಡಿಸಿ ನಿನ್ನ ಬಲಗೈ ನನ್ನನ್ನು ಹಿಡಿಯುವದು.

11ನಿಶ್ಚಯವಾಗಿ ಕತ್ತಲೆಯು ನನ್ನನ್ನು ಕವಿದು ಕೊಳ್ಳುವದೆಂದು ನಾನು ಹೇಳಿದರೆ ರಾತ್ರಿಯು ನನ್ನ ಸುತ್ತಲೂ ಬೆಳಕಾಗಿರುವದು.

Kannada Bible (Old Version), Bible Society of India.