1ನನ್ನ ಕೈಗಳಿಗೆ ಕಾಳಗವನ್ನು, ನನ್ನ ಬೆರಳುಗಳಿಗೆ ಯುದ್ಧವನ್ನು, ಕಲಿಸಿದ ನನ್ನ ಬಲವಾಗಿರುವ ಕರ್ತನಿಗೆ ಸ್ತೋತ್ರವಾಗಲಿ.
2ಆತನು ನನ್ನ ಒಳ್ಳೇತನವೂ ನನ್ನ ಕೋಟೆಯೂ ನನ್ನ ಎತ್ತರವಾದ ದುರ್ಗವೂ ನನ್ನನ್ನು ತಪ್ಪಿಸುವವನೂ ನನ್ನ ಭರವಸವೂ ನನ್ನ ಗುರಾಣಿಯೂ ನನ್ನ ಜನರನ್ನು ನನಗೆ ವಶಮಾಡುವಾತನೂ ಆಗಿದ್ದಾನೆ.
3ಕರ್ತನೇ, ನೀನು ಮನುಷ್ಯನನ್ನು ತಿಳುಕೊಳ್ಳುವ ಹಾಗೆ ಅವನು ಎಷ್ಟರವನು? ನೀನು ಅವನನ್ನು ಲಕ್ಷಿಸುವ ಹಾಗೆ ನರಪುತ್ರನು ಎಷ್ಟರವನು?
4ಮನುಷ್ಯನು ವ್ಯರ್ಥತೆಗೆ ಸಮಾನನಾಗಿದ್ದಾನೆ; ಅವನ ದಿವಸಗಳು ಕಳೆದುಹೋಗುವ ನೆರಳಿನ ಹಾಗಿವೆ.