ಸ್ತುತಿಗಳು 149

ಆತನ ಹೆಸರನ್ನು ಕುಣಿಯುತ್ತಾ ಸ್ತುತಿಸಲಿ; ದಮ್ಮಡಿ ಯಿಂದಲೂ ಕಿನ್ನರಿಯಿಂದಲೂ ಆತನನ್ನು ಕೀರ್ತಿಸಲಿ.

Psalm 149:3 (UKJV) Let them praise his name in the dance: let them sing praises unto him with the timbrel and harp.

11 ಕರ್ತನನ್ನು ಸ್ತುತಿಸಿರಿ. ಕರ್ತನಿಗೆ ಹೊಸ ಹಾಡನ್ನೂ ಪರಿಶುದ್ಧರ ಸಭೆ ಯಲ್ಲಿ ಆತನ ಸ್ತೋತ್ರವನ್ನೂ ಹಾಡಿರಿ.

2ಇಸ್ರಾಯೇಲು ತನ್ನನ್ನು ಉಂಟುಮಾಡಿದಾತನಲ್ಲಿ ಸಂತೋಷಿಸಲಿ; ಚೀಯೋನಿನ ಮಕ್ಕಳು ತಮ್ಮ ಅರಸನಲ್ಲಿ ಉಲ್ಲಾಸಿಸಲಿ.

3ಆತನ ಹೆಸರನ್ನು ಕುಣಿಯುತ್ತಾ ಸ್ತುತಿಸಲಿ; ದಮ್ಮಡಿ ಯಿಂದಲೂ ಕಿನ್ನರಿಯಿಂದಲೂ ಆತನನ್ನು ಕೀರ್ತಿಸಲಿ.

4ಕರ್ತನು ತನ್ನ ಜನರಲ್ಲಿ ಇಷ್ಟಪಡುತ್ತಾನೆ; ದೀನರನ್ನು ರಕ್ಷಣೆಯಿಂದ ಅಲಂಕರಿಸುತ್ತಾನೆ.

5ಪರಿಶುದ್ಧರು ಘನತೆಯಿಂದ ಉತ್ಸಾಹಪಡಲಿ; ತಮ್ಮ ಹಾಸಿಗೆಗಳ ಮೇಲೆ ಉತ್ಸಾಹಧ್ವನಿಮಾಡಲಿ.

Kannada Bible (Old Version), Bible Society of India.