6ಅವುಗಳನ್ನು ಕರುವಿನ ಹಾಗೆಯೂ ಲೆಬನೋನನ್ನೂ ಶಿರಿಯೋನನ್ನೂ ಎಳೇಕಾಡುಕೋಣದ ಹಾಗೆಯೂ ಹಾರಾಡುವಂತೆ ಮಾಡುತ್ತಾನೆ.
7ಕರ್ತನ ಸ್ವರವು ಅಗ್ನಿ ಜ್ವಾಲೆಗಳನ್ನು ಭೇದಿಸುತ್ತದೆ.
8ಕರ್ತನ ಸ್ವರವು ಅರಣ್ಯ ವನ್ನು ಕದಲಿಸುತ್ತದೆ; ಕರ್ತನು ಕಾದೇಶ್ ಅರಣ್ಯವನ್ನು ಕದಲಿಸುತ್ತಾನೆ.
9ಕರ್ತನ ಸ್ವರವು ಜಿಂಕೆಗಳನ್ನು ಈಯ ಮಾಡಿ ಅಡವಿಗಳನ್ನು ಬಯಲು ಮಾಡುತ್ತದೆ; ಆತನ ಮಂದಿರದಲ್ಲಿ ಪ್ರತಿಯೊಬ್ಬನು ಆತನ ಮಹಿಮೆಯ ವಿಷಯವಾಗಿ ಮಾತನಾಡುತ್ತಾನೆ.
10ಕರ್ತನು ಪ್ರಳಯದ ಮೇಲೆ ಕೂತುಕೊಳ್ಳುತ್ತಾನೆ; ಹೌದು, ಯುಗಯುಗಕ್ಕೂ ಕರ್ತನು ಅರಸನಾಗಿ ಕೂತು ಕೊಂಡಿದ್ದಾನೆ.