ಸ್ತುತಿಗಳು 31

ಸತ್ತವನ ಹಾಗೆ ಮನಸ್ಸಿನೊಳಗಿಂದ ಮರೆತು ಬಿಡಲ್ಪಟ್ಟಿದ್ದೇನೆ; ನಾನು ಒಡೆದ ಬೋಕಿಯ ಹಾಗೆ ಇದ್ದೆನೆ.

Psalm 31:12 (UKJV) I am forgotten as a dead man out of mind: I am like a broken vessel.

10ನನ್ನ ಜೀವವು ಚಿಂತೆ ಯಿಂದಲೂ ನನ್ನ ವರುಷಗಳು ನಿಟ್ಟುಸುರಿನಿಂದಲೂ ತೀರಿಹೋಗಿವೆ; ನನ್ನ ಶಕ್ತಿಯು ನನ್ನ ಅಪರಾಧದಿಂದ ಕುಂದಿ ಎಲುಬುಗಳು ಕ್ಷೀಣವಾಗಿವೆ.

11ನನ್ನ ವೈರಿ ಗಳೆಲ್ಲರಿಗೆ, ವಿಶೇಷವಾಗಿ ನನ್ನ ನೆರೆಯವರಿಗೆ, ನಾನು ನಿಂದೆಯೂ ಪರಿಚಿತರಿಗೆ ಹೆದರಿಕೆಯೂ ಆಗಿದ್ದೇನೆ; ಹೊರಗೆ ನನ್ನನ್ನು ನೋಡಿದವರು ನನ್ನನ್ನು ಬಿಟ್ಟು ಓಡಿಹೋದರು.

12ಸತ್ತವನ ಹಾಗೆ ಮನಸ್ಸಿನೊಳಗಿಂದ ಮರೆತು ಬಿಡಲ್ಪಟ್ಟಿದ್ದೇನೆ; ನಾನು ಒಡೆದ ಬೋಕಿಯ ಹಾಗೆ ಇದ್ದೆನೆ.

13ನಾನು ಅನೇಕರ ಚಾಡಿಯನ್ನು ಕೇಳಿದ್ದೇನೆ; ಸುತ್ತಲೂ ಭಯ ಅದೆ; ನನಗೆ ವಿರೋಧ ವಾಗಿ ಆಲೋಚನೆ ಮಾಡಿ ನನ್ನ ಪ್ರಾಣ ತೆಗೆದು ಕೊಳ್ಳುವದಕ್ಕೆ ಅವರು ಯೋಚಿಸುತ್ತಾರೆ.

14ಓ ಕರ್ತನೇ, ನಾನು ನಿನ್ನಲ್ಲಿ ಭರವಸವಿಟ್ಟಿದ್ದೇನೆ; ನನ್ನ ದೇವರು ನೀನೇ ಎಂದು ಹೇಳಿದ್ದೇನೆ.

Kannada Bible (Old Version), Bible Society of India.